ಸಾಗರ: ಪ್ರತಿಭೆಯುಳ್ಳ ಪ್ರತಿಯೊಬ್ಬರೂ ವಿದೇಶಕ್ಕೆ ಹೋಗಿ ಯಶಸ್ಸು ಗಳಿಸುವ ಬದಲು ಹುಟ್ಟಿದ ದೇಶದಲ್ಲಿದ್ದುಕೊಂಡೇ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಾಣಲು ಪ್ರಯತ್ನಿಸಬೇಕು ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು.

ಇಲ್ಲಿನ ಶೃಂಗೇರಿ ಶಂಕರ ಮಠದಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಹಣದಿಂದ ಯಶಸ್ಸು ದೊರಕುತ್ತದೆ ಎಂಬ ಮನೋಭಾವ ಸರಿಯಲ್ಲ. ಸತತ ಪರಿಶ್ರಮವಿದ್ದರೆ ಹಣದ ಜೊತೆಗೆ ಯಶಸ್ಸು ಕೂಡ ನಮ್ಮನ್ನು ಹಿಂಬಾಲಿಸುತ್ತದೆ.ಜೀವನದಲ್ಲಿ ನಾವು ವೈಯುಕ್ತಿಕವಾಗಿ ಯಶಸ್ಸು ಗಳಿಸಿದರೆ ಸಾಲದು. ಅದರ ಜೊತೆಗೆ ಮತ್ತೊಬ್ಬರು ಬದುಕು ಕಟ್ಟಿಕೊಳ್ಳಲು ನೆರವಾದರೆ ನಮ್ಮ ಬದುಕು ಸಾರ್ಥಕಗೊಂಡಂತೆ’ ಎಂದರು.

ಯುವಜನರು ಪ್ರತಿಯೊಂದಕ್ಕೂ ನೆಪ ಹೇಳುವುದನ್ನು, ಇತರರನ್ನು ದೂಷಿಸುವುದನ್ನು ಬಿಟ್ಟು ಸ್ವಂತ ಸಾಮರ್ಥ್ಯದ ಮೇಲೆ ಜೀವನವನ್ನು ರೂಪಿಸಿಕೊಳ್ಳುವ ಕುರಿತು ಚಿಂತನೆ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.

ವರ್ತಕ ಮಧುಕರ ನರಸಿಂಹ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್.ಜಿ.ಶ್ಯಾನುಭಾಗ್, ಟಿ.ವಿ.ಪಾಂಡುರಂಗ, ಬಿ.ಎಚ್.ಲಿಂಗರಾಜ್, ಬಸವರಾಜ್,ಮ.ಸ.ನಂಜುಂಡಸ್ವಾಮಿ, ಅಶ್ವಿನಿಕುಮಾರ್, ಬದರಿನಾಥ್, ಸದಾನಂದ ಶರ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.