ಹುಬ್ಬಳ್ಳಿ: ದೀಪಾವಳಿ ಬಳಿಕ ಮಳೆರಾಯ ವಿರಾಮ ನೀಡಿರುವುದರಿಂದ ಕೃಷಿಕರು ಹೊಲದತ್ತ ಮುಖ ಮಾಡಿದ್ದಾರೆ. ಮುಂಗಾರು, ಹಿಂಗಾರು ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ರೈತರು ಇದೀಗ ಹಿಂಗಾರು ಬಿತ್ತನೆಗೆ ಹೊಲವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಅಣ್ಣಿಗೇರಿ, ನವಲಗುಂದ, ಕುಂದಗೋಳ, ಹುಬ್ಬಳ್ಳಿ ಭಾಗದಲ್ಲಿ ಹತ್ತಿ, ಜೋಳ ಹಾಗೂ ಅಳ್ನಾವರ, ಕಲಘಟಗಿ ವ್ಯಾಪ್ತಿಯಲ್ಲಿ ಭತ್ತ, ಜೋಳದ ಕೊಯ್ಲು ಇದೀಗ ಆರಂಭಗೊಂಡಿದೆ.

ತಲೆಬೇನೆ:‘ನಿರಂತರ ಮಳೆಯಿಂದಾಗಿ ಹೊಲದಲ್ಲಿ ಕಳೆ ರಾಶಿ, ರಾಶಿ ಬೆಳೆದಿದ್ದು, ಹಸನು ಮಾಡುವುದು ತಲೆಬೇನೆಯಾಗಿದೆ. ಎರಡು ವಾರಗಳಿಂದ ಮಳೆ ತಗ್ಗಿರುವುದರಿಂದ ಹಿಂಗಾರು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ’ ಎಂದು ಬೈರಿದೇವರಕೊಪ್ಪದ ರೈತ ಶಿವಾನಂದ ಮಾಯ್ಕಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಡ್ಡ ಮಳೆ ಬೀಳದಿದ್ದರೆ ಕಡಲೆ ಬಿತ್ತನೆಗೆ ಅನುಕೂಲವಾಗಲಿದೆ. ಜೊತೆಗೆ ಮುಂಗಾರು ಫಸಲಿನ ಕೊಯ್ಲಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.

ಬಿತ್ತನೆ ಗುರಿ:ಜಿಲ್ಲೆಯಲ್ಲಿ 1,93,727 ಹೆಕ್ಟೇರ್ನಲ್ಲಿ ಹಿಂಗಾರು ಬಿತ್ತನೆ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಬೀದ್ ಎ.ಎ. ‘ಪ್ರಜಾವಾಣಿ’ಗೆ ತಿಳಿಸಿದರು.

ಕಡಲೆ, ಕುಸುಬಿ, ಗೋಧಿ, ಮೆಕ್ಕೆಜೋಳಯನ್ನು ಪ್ರಮುಖವಾಗಿ ಹಿಂಗಾರು ಅವಧಿಯಲ್ಲಿ ಬಿತ್ತನೆ ಮಾಡಲಾಗುತ್ತದೆ. 13 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಸಂಗ್ರಹವಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.