ಹುಬ್ಬಳ್ಳಿಗೆ ಚೋಟಾ ಮುಂಬೈ, ವಾಣಿಜ್ಯನಗರಿ ಎಂಬೆಲ್ಲ ವಿಶೇಷಣಗಳೊಂದಿಗೆ ಗುರುತಿಸಿಕೊಳ್ಳುವ ಮೊದಲು, ಪಂಚ ಕೆರೆಗಳ ನಗರಿ ಎಂದೇ ಕರೆಯಲಾಗುತ್ತಿತ್ತು. ಆದರೆ, ಆ ಕೆರೆಗಳ ಸಮಾಧಿಯ ಮೇಲೆಯೇ ಅಲಂಕೃತ ಕಟ್ಟಡಗಳನ್ನು ಕಟ್ಟಲಾಗಿದೆ. ಪಂಚ ಕೆರೆಗಳ ನಗರಿ ಹುಬ್ಬಳ್ಳಿಯಲ್ಲಿ ಆ ಐದು ದೊಡ್ಡ ಕೆರೆಗಳು ಸೇರಿದಂತೆ ಇನ್ನೂ ಅನೇಕ ಕೆರೆಗಳಿದ್ದವು. ಅವುಗಳನ್ನು ಇಂದು ಹೆಸರು ಹೇಳಲೂ ಉಳಿಸಿಕೊಂಡಿಲ್ಲ. ಜಿಲ್ಲಾಡಳಿತ ಹಾಗೂ ಪಾಲಿಕೆಯಿಂದಲೇ ಈ ಕೆರೆಗಳ ಒತ್ತುವರಿಗೆ ಕಾರಣವಾಗಿರುವುದು ಶೋಚನೀಯ.

ಉಣಕಲ್ ಕೆರೆ, ತಿರುಕರಾಮನ ಕೆರೆ, ತೋಳನಕೆರೆ, ಹೆಗ್ಗೇರಿ ಕೆರೆ, ಗುಳಕವ್ವನ ಕೆರೆಗಳು ಸಾಕಷ್ಟು ಸಂಕಷ್ಟ ಎದುರಿಸಿವೆ, ಎದುರಿಸುತ್ತಿವೆ. ಅದರಲ್ಲಿ ತಿರುಕರಾಮನ ಕೆರೆ ಎಂದರೆ ಈಗಿನ ಬಹುತೇಕರಿಗೆ ಗೊತ್ತೇ ಆಗುವುದಿಲ್ಲ. ಐಟಿ ಪಾರ್ಕ್ ಎಂದರೆ ಅರಿವಾಗುತ್ತದೆ. ಇಂದು ಹುಬ್ಬಳ್ಳಿಯ ಲ್ಯಾಂಡ್ಮಾರ್ಕ್ ಆಗಿ ಗುರುತಿಸಿಕೊಂಡಿರುವ ಐಟಿ ಪಾರ್ಕ್ ಹಾಗೂ ಪಾಲಿಕೆ ಇತ್ತೀಚೆಗಷ್ಟೇ ಉದ್ಘಾಟನೆ ಮಾಡಿದಅಂತರರಾಷ್ಟ್ರೀಯ ಈಜುಕೊಳ ಪ್ರದೇಶವೇ ತಿರುಕರಾಮನಕೆರೆ. 4 ಎಕರೆ 30 ಗುಂಟೆ ಪ್ರದೇಶದಲ್ಲಿದ್ದ ಮರಿಯ ತಿಮ್ಮಸಾಗರದ ಕೆರೆಯೇ ತಿರುಕರಾಮನ ಕೆರೆ. ಈಗ ಅದರ ನಾಮಾವಶೇಷವೂ ಉಳಿದಿಲ್ಲ. ಈಜುಕೊಳ ಸಂಕೀರ್ಣ, ಐಟಿ ಪಾರ್ಕ್, ಪಾಸ್ಪೋರ್ಟ್ ಸೇವಾ ಕೇಂದ್ರ, ವಾಣಿಜ್ಯ ಮಳಿಗೆಗಳಾಗಿ ಪರಿವರ್ತನೆಯಾಗಿದೆ.

ಇದೇ ಮರಿಯನ ತಿಮ್ಮಸಾಗರ ವ್ಯಾಪ್ತಿಯಲ್ಲಿದ್ದ ಅತಿದೊಡ್ಡ ಕೆರೆ ಇಂದು ಕಾಟನ್ ಮಾರ್ಕೆಟ್ ಆಗಿದೆ. 52 ಎಕರೆ 15 ಕುಂಟೆ ವ್ಯಾಪ್ತಿಯಲ್ಲಿದ್ದ ಈ ಕೆರೆ ಇಂದು ಕಾಣಸಿಗುವುದಿಲ್ಲ. ರಸ್ತೆ, ಪೊಲೀಸ್ ಸ್ಟೇಷನ್, ಸಾಂಸ್ಕೃತಿಕ ಭವನ, ದೇವಸ್ಥಾನ, ಕಟ್ಟಡಗಳು, ವಾಣಿಜ್ಯ ಕಟ್ಟಡಗಳಾಗಿ ಪರಿವರ್ತನೆಯಾಗಿದೆ.ಇಂದಿನ ಪ್ರತಿಷ್ಠಿತ ಬಡಾವಣೆಗಳು, ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಈ ಕೆರೆಯನ್ನು ಸಂಪೂರ್ಣವಾಗಿ ಆಹುತಿ ತೆಗೆದುಕೊಂಡಿವೆ.

ಹುಬ್ಬಳ್ಳಿಯಲ್ಲೇ ತನ್ನ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದ ಮಾದಿನಾಯಕನ ಅರಳಿಕಟ್ಟೆ ಗ್ರಾಮದ ಸರ್ವೆ ಸಂಖ್ಯೆಗಳಲ್ಲಿದ್ದ ನಾಲ್ಕು ಕೆರೆಗಳೂ ಅಭಿವೃದ್ಧಿ ಹಾಗೂ ಒತ್ತುವರಿಯಿಂದ ಅಸ್ತಿತ್ವ ಕಳೆದುಕೊಂಡಿವೆ. ಕ್ರೀಡಾಂಗಣ, ಶಾಲೆ, ದೇವಸ್ಥಾನ, ಕೊಳೆಗೇರಿ, ವಾಣಿಜ್ಯ ಕಟ್ಟಡ, ಮಾರುಕಟ್ಟೆ, ವಸತಿ ಪ್ರದೇಶಕ್ಕೆ ನಾಲ್ಕೂ ಕೆರೆಗಳು ಬಲಿಯಾಗಿವೆ. ಮಳೆ ಬಂದಾಗ ಅವುಗಳ ಅಸ್ತಿತ್ವ ಎದ್ದುಕಾಣುತ್ತದೆ. ಆದರೆ, ಆ ಸಂದರ್ಭದಲ್ಲಿ ಯಾರೂ ಕೆರೆ ಇತ್ತು ಎಂಬುದನ್ನು ಮನಗಾಣುವುದಿಲ್ಲ, ಬದಲಿಗೆ ಪಾಲಿಕೆಯನ್ನು ಬೈದು ನೀರು ಹೋಗದಂತೆ ವ್ಯವಸ್ಥೆ ಮಾಡಿಲ್ಲ ಎಂದು ಎಲ್ಲರಲ್ಲೂ ದೂರುತ್ತಾರೆ ಅಷ್ಟೇ.

ಮಾದಿನಾಯಕನ ಅರಳಿಕಟ್ಟೆ (ಎಂ. ಅರಳಿಕಟ್ಟೆ) ಸರ್ವೆ ನಂ.102ರಲ್ಲಿ 7 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿದ್ದ ಕೆರೆ ಇದೀಗ ಮನೆಗಳು, ದೇವಸ್ಥಾನ, ಕೊಳೆಗೇರಿಯಾಗಿ ಪರಿವರ್ತನೆಯಾಗಿದೆ. ಮಂಟೂರು ರಸ್ತೆಯಲ್ಲಿರುವ ಮಿಲಾಯತ್ ನಗರ, ಕೃಪಾನಗರದ ವ್ಯಾಪ್ತಿ ಈ ಕೆರೆಯದ್ದು. ಎಂ. ಅರಳಿಕಟ್ಟೆಯ ಎರಡನೇ ಕೆರೆ ವಾಣಿಜ್ಯ ಕಟ್ಟಡ ಹಾಗೂ ಮಾರುಕಟ್ಟೆಯಾಗಿದೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿಂತು ದಾಜಿಬಾನ್ಪೇಟೆ ರಸ್ತೆ ಕಡೆ ನೋಡಿದರೆ ಆ ಪ್ರದೇಶವೇ ಈ ಕೆರೆ ಅಂಗಳ.

ಇನ್ನು ಮೂರನೆ ಕೆರೆ ಬಗ್ಗೆ ಹೇಳಲೇಬೇಕು. ಈ ಕೆರೆಯನ್ನು ಮುಚ್ಚಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರೂ, ಇಂದಿಗೂ ಮಳೆ ಬಂದಾಗ ಇಲ್ಲಿ ಏನೂ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕೆರೆಯ ಅಸ್ತಿತ್ವವನ್ನು ಇಲ್ಲದಂತೆ ಮಾಡುವ ಮನುಷ್ಯ ಪ್ರಯತ್ನ ಪ್ರಕೃತಿಯನ್ನು ಮೀರಲು ಸಾಧ್ಯವಿಲ್ಲ ಎಂಬುದು ಪ್ರತಿ ಮಳೆಯ ಸಂದರ್ಭದಲ್ಲಿ ಸಾಕ್ಷೀಭೂತ ನೆಹರೂ ಸ್ಟೇಡಿಯಂ. ಎಂ. ಅರಳಿ ಕಟ್ಟೆಯ ಸರ್ವೆ ನಂ. 16ರಲ್ಲಿ 6ಕ್ಕೂ ಹೆಚ್ಚು ಎಕರೆ ವ್ಯಾಪ್ತಿಯಲ್ಲಿದ್ದ ಗುಳಕವ್ವನ ಕೆರೆ ಇಂದು ಜೆ.ಸಿ ನಗರದಲ್ಲಿರುವ ನೆಹರೂ ಸ್ಟೇಡಿಯಂ ಆಗಿದೆ. ಕ್ರೀಡಾಂಗಣಕ್ಕೆ ಮಳೆ ನೀರು ಹೋಗದಂತೆ ತಡೆಯಲು ಇಂದಿಗೂ ಸಾಕಷ್ಟು ತಂತ್ರಜ್ಞಾನ ಬಳಸಿ, ಕೋಟ್ಯಂತರ ಬಳಸಿ ಸ್ವಾರ್ಟ್ ಸಿಟಿ ಯೋಜನೆಯಡಿಯೂ ಕೋಟ್ಯಂತರ ವೆಚ್ಚ ಮಾಡಲಾಗುತ್ತಿದೆ.

ಮೂರು ಸಾವಿರ ಮಠದ ಆವರಣದಲ್ಲಿದ್ದ ಎಂ.ಅರಳಿಕಟ್ಟೆಯ ಕುಂಟೆ ‘ಶ್ರೀಮತಿ ಸುಧಾ ಆರ್. ಶೆಟ್ಟಿ ಬಾಲಕಿಯರ ಪ್ರೌಢಶಾಲೆ’ಯಾಗಿದೆ. ಇದು ಅತಿ ಚಿಕ್ಕ ಅಂದರೆ ಮೂರು ಗುಂಟೆ ಎಂದು ದಾಖಲಾಗಿದ್ದರೂ, ಇಲ್ಲಿ ಹಳ್ಳ ಹರಿಯುತ್ತಿದ್ದರಿಂದ ಮಹತ್ವದ ಪಾತ್ರ ವಹಿಸಿತ್ತು. ಉಣಕಲ್ ಕೆರೆಯಿಂದ ಕಾಲುವೆ ಸಂಪರ್ಕವಿದ್ದ ಹಳ್ಳ ಇದಾಗಿತ್ತು. ಈ ಹಳ್ಳವಿದ್ದುದ್ದರಿಂದಲೇ ಅಂದಿನ ಕಾಲದಲ್ಲಿ ಸ್ವಾಮೀಜಿಗಳು ಮಠ ಸ್ಥಾಪಿಸಿ ನೆಲೆ ನಿಂತದ್ದು. ಆದರೆ ಇಂದು ಹಳ್ಳವೂ ಇಲ್ಲ ಮತ್ತು ಕುಂಟೆಯೂ ಇಲ್ಲ. ಹೀಗೆ, ಕಟ್ಟಡಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಸಂಸ್ಥೆಗಳಾದ ಜಿಲ್ಲಾಡಳಿತ, ಪಾಲಿಕೆಗಳೇ ಕೆರೆ ಒತ್ತುವರಿ ಮಾಡುವ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ಇತರರಿಗೆ ಮಾದರಿಯಂತಾಗಿದೆ.

# 76– ಮರಿಯನ ತಿಮ್ಮಸಾಗರ ಕೆರೆ

ಎಲ್ಲಿದೆ?: ಮರಿಯನ ತಿಮ್ಮಸಾಗರ, ಹುಬ್ಬಳ್ಳಿ

ವಿಸ್ತಾರ: ಸರ್ವೆ ನಂ. 77;52 ಎಕರೆ 15 ಗುಂಟೆ

ನಿರ್ಮಾಣ: 1871

ಪರಿಸ್ಥಿತಿ: ದೊಡ್ಡ ಕೆರೆಯಾಗಿ ದಾಖಲೆ ಇದ್ದರೂ, ರಸ್ತೆ, ಪೊಲೀಸ್ ಸ್ಟೇಷನ್, ಸಾಂಸ್ಕೃತಿಕ ಭವನ, ದೇವಸ್ಥಾನ, ಕಟ್ಟಡಗಳು, ವಾಣಿಜ್ಯ ಕಟ್ಟಡಗಳಾಗಿ ಪರಿವರ್ತನೆಯಾಗಿದೆ.

# 77– ಮರಿಯನ ತಿಮ್ಮಸಾಗರ ಕುಂಟೆ

ಎಲ್ಲಿದೆ?:ಮರಿಯನ ತಿಮ್ಮಸಾಗರ, ಹುಬ್ಬಳ್ಳಿ

ವಿಸ್ತಾರ: ಸರ್ವೆ ನಂ. 78;4 ಎಕರೆ 30 ಗುಂಟೆ

ನಿರ್ಮಾಣ: 1871

ಪರಿಸ್ಥಿತಿ: ಈಜುಕೊಳ ಸಂಕೀರ್ಣ, ಐಟಿ ಪಾರ್ಕ್, ಪಾಸ್ಪೋರ್ಟ್ ಸೇವಾ ಕೇಂದ್ರ, ವಾಣಿಜ್ಯ ಮಳಿಗೆಗಳಾಗಿ ಪರಿವರ್ತನೆಯಾಗಿದೆ.

# 78– ಎಂ. ಅರಳಿಕಟ್ಟೆ ಕೆರೆ –1

ಎಲ್ಲಿದೆ?: ಎಂ. ಅರಳಿಕಟ್ಟೆ, ಹುಬ್ಬಳ್ಳಿ

ವಿಸ್ತಾರ: ಸರ್ವೆ ನಂ. 102;7 ಎಕರೆ 20 ಗುಂಟೆ

ನಿರ್ಮಾಣ: 1870

ಪರಿಸ್ಥಿತಿ:ಮನೆಗಳು, ದೇವಸ್ಥಾನ, ತೆರೆದ ಪ್ರದೇಶ ಮತ್ತು ಕೊಳೆಗೇರಿಯಾಗಿ ಮಾರ್ಪಾಟಾಗಿದೆ.

# 79– ಎಂ. ಅರಳಿಕಟ್ಟೆ ಕುಂಟೆ

ಎಲ್ಲಿದೆ?:ಎಂ. ಅರಳಿಕಟ್ಟೆ, ಹುಬ್ಬಳ್ಳಿ

ವಿಸ್ತಾರ: ಸರ್ವೆ ನಂ. 2;3 ಗುಂಟೆ

ನಿರ್ಮಾಣ: 1870

ಪರಿಸ್ಥಿತಿ:ಶಾಲಾ ಮೈದಾನವಾಗಿದೆ.

# 80– ಎಂ. ಅರಳಿಕಟ್ಟೆ ಕೆರೆ –2

ಎಲ್ಲಿದೆ?:ಎಂ. ಅರಳಿಕಟ್ಟೆ, ಹುಬ್ಬಳ್ಳಿ

ವಿಸ್ತಾರ: ಸರ್ವೆ ನಂ. 7;1 ಎಕರೆ 14 ಗುಂಟೆ

ನಿರ್ಮಾಣ: 1870

ಪರಿಸ್ಥಿತಿ:ವಾಣಿಜ್ಯ ಕಟ್ಟಡಗಳು ಹಾಗೂ ಮಾರುಕಟ್ಟೆಯಾಗಿ ಮಾರ್ಪಾಟಾಗಿದೆ.

# 81– ಎಂ. ಅರಳಿಕಟ್ಟೆ ಕೆರೆ –3

ಎಲ್ಲಿದೆ?:ಎಂ. ಅರಳಿಕಟ್ಟೆ, ಹುಬ್ಬಳ್ಳಿ

ವಿಸ್ತಾರ: ಸರ್ವೆ ನಂ. 16;6 ಎಕರೆ 10 ಗುಂಟೆ

ನಿರ್ಮಾಣ: 1870

ಪರಿಸ್ಥಿತಿ:ನೆಹರೂ ಸ್ಟೇಡಿಯಂ ಆಗಿದೆ.

# ಮರಿಯನ ತಿಮ್ಮಸಾಗರಕೆರೆ

ವಿಸ್ತಾರ: ಸರ್ವೆ ನಂ. 77;52 ಎಕರೆ 15 ಗುಂಟೆ

ನಿರ್ಮಾಣ: 1871

ಎಲ್ಲಿದೆ?: ಕಾಟನ್ಮಾರ್ಕೆಟ್, ಹುಬ್ಬಳ್ಳಿ

# ಕುಂಟೆ /ತಿರುಕರಾಮನ ಕೆರೆ

ವಿಸ್ತಾರ: ಸರ್ವೆ ನಂ. 78;4 ಎಕರೆ 30 ಗುಂಟೆ

ನಿರ್ಮಾಣ: 1871

ಎಲ್ಲಿದೆ?: ಈಜುಕೊಳ ಸಂಕೀರ್ಣ, ಐಟಿ ಪಾರ್ಕ್, ಹುಬ್ಬಳ್ಳಿ

# ಎಂ. ಅರಳಿಕಟ್ಟೆಕೆರೆ –1

ವಿಸ್ತಾರ: ಸರ್ವೆ ನಂ. 102;7 ಎಕರೆ 20 ಗುಂಟೆ

ನಿರ್ಮಾಣ: 1870

ಎಲ್ಲಿದೆ?: ಮಿಲಾಯತ್ ನಗರ, ಕೃಪಾ ನಗರ, ಮಂಟೂರು ರಸ್ತೆ, ಹುಬ್ಬಳ್ಳಿ

# ಕೆರೆ –2

ವಿಸ್ತಾರ: ಸರ್ವೆ ನಂ. 7;1 ಎಕರೆ 14 ಗುಂಟೆ

ನಿರ್ಮಾಣ: 1870

ಎಲ್ಲಿದೆ?: ಸಂಗೊಳ್ಳಿರಾಯಣ್ಣ ವೃತ್ತದ ಹತ್ತಿರ, ದಾಜಿಬಾನ್ ಪೇಟೆ ರಸ್ತೆ, ಕಮರಿಪೇಟೆ

# ಕೆರೆ –3

ವಿಸ್ತಾರ: ಸರ್ವೆ ನಂ. 16;6 ಎಕರೆ 10 ಗುಂಟೆ

ನಿರ್ಮಾಣ: 1870

ಎಲ್ಲಿದೆ?: ನೆಹರೂ ಸ್ಟೇಡಿಯಂ, ಜೆ.ಸಿ.ನಗರ, ಹುಬ್ಬಳ್ಳಿ

# ಕುಂಟೆ

ವಿಸ್ತಾರ: ಸರ್ವೆ ನಂ. 2;3 ಗುಂಟೆ

ನಿರ್ಮಾಣ: 1870

ಎಲ್ಲಿದೆ?:ಮೂರು ಸಾವಿರ ಮಠ ಮೈದಾನ, ಕಮರಿಪೇಟೆ, ಹುಬ್ಬಳ್ಳಿ.

# ಮರಿಯನ ತಿಮ್ಮಸಾಗರ

ಕೆರೆl ದುರ್ಬಳಕೆ

ವಿಸ್ತಾರ: ಸರ್ವೆ ನಂ. 77;52 ಎಕರೆ 15 ಗುಂಟೆ

ನಿರ್ಮಾಣ: 1871

ಎಲ್ಲಿದೆ?: ಕಾಟನ್ಮಾರ್ಕೆಟ್, ಹುಬ್ಬಳ್ಳಿ

# ಕುಂಟೆ / ತಿರುಕರಾಮನ ಕೆರೆlದುರ್ಬಳಕೆ

ಎಂ. ಅರಳಿಕಟ್ಟೆ

# ಕೆರೆ –1l ದುರ್ಬಳಕೆ

# ಕೆರೆ –2l ದುರ್ಬಳಕೆ

# ಕೆರೆ –3l ದುರ್ಬಳಕೆ

# ಕುಂಟೆl ದುರ್ಬಳಕೆ

(ಎಂಪ್ರಿ ಅಧ್ಯಯನದ ಪ್ರಕಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.