ಕಲಘಟಗಿ: ದೇಶದ 100 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕುವ ಕೆಲಸವನ್ನು ನಿರಂತರವಾಗಿ ಮಾಡಲು ಕೈ ಜೋಡಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮ ಅಪಾರವಾಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಹತ್ತಿರದ ಅಮೃತ ನಿವಾಸದಲ್ಲಿ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರಿಗೆ, ಆರೋಗ್ಯ ಇಲಾಖೆ ಶುಶ್ರೂಷಕರು ಮತ್ತು ಪೌರ ಕಾರ್ಮಿಕರು ಸೇರಿದಂತೆ ಸುಮಾರು 1200 ಮಹಿಳಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಅವರು ಮಾತನಾಡಿದರು.

‘ಜೀವದ ಹಂಗು ತೊರೆದು ಮನೆಮನೆಗೆ ತೆರಳಿ ಸೇವೆ ಮಾಡಿದ ನಿಮಗೆಲ್ಲರಿಗೂ ಅಭಿನಂದನೆಗಳು. ನಮ್ಮ ಪೌರಕಾರ್ಮಿಕರಿಗೆ ಕನಿಷ್ಠ ವೇತನ ₹15,000 ಸಿಗುತ್ತಿದ್ದರೆ ಅದಕ್ಕೆ ನನ್ನ ಶ್ರಮ ಕೂಡ ಇದೆ’ ಎಂದರು.

ಮಾಜಿ ಸಚಿವ ಚೆಲುವ ನಾರಾಯಣಸ್ವಾಮಿ ಮಾತನಾಡಿ ‘ಕಲಘಟಗಿ ಮತಕ್ಷೇತ್ರಕ್ಕೆ ಸಂತೋಷ ಲಾಡ್ ಅವರ ಕೊಡುಗೆ ಸಾಕಷ್ಟಿದೆ’ ಎಂದರು. ಕೆಪಿಪಿಸಿ ವಕ್ತಾರ ಕವಿತಾ ರೆಡ್ಡಿ, ದೇವಕಿ ಯೋಗನಂದ, ಮಾಜಿ ಸಂಸದ ಐ.ಜಿ ಸನದಿ ಮಾತನಾಡಿದರು.

ಮಾಜಿ ಸಚಿವ ಎಂ.ಎಂ ಹಿಂಡಸಗೇರಿ, ಮುಖಂಡರಾದ ಮೋಹನ ಹಿರೇಮನಿ, ಅಲ್ತಾಫ್ ಕಿತ್ತೂರ, ಎಸ್. ಆರ್ ಪಾಟೀಲ, ದಾನಪ್ಪ ಕಬ್ಬೇರ, ಮಂಜುನಾಥ ಮುರಳ್ಳಿ, ಲಿಂಗರಡ್ಡಿ ನಡುವಿನಮನಿ, ಇಸ್ಮಾಯಿಲ್ ತಮಟಗಾರ, ಅಜ್ಮತ ಜಾಗೀರದಾರ, ಯಲ್ಲಪ್ಪ ದಾಸನಕೂಪ್ಪ, ಆನಂದ ಕಲಾಲ, ನರೇಶ ಮಲೆನಾಡು, ಗುರು ಬೆಂಗೇರಿ, ಗಂಗಾಧರ ಚಿಕ್ಕಮಠ, ಶಿವಲಿಂಗ ಮೂಗಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.