ಧಾರವಾಡ:84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಶುಕ್ರವಾರ ಬೆಳಿಗ್ಗೆ ಆರಂಭವಾಗುವ ಮೂಲಕ ಮುನ್ನುಡಿ ಬರೆದಿದ್ದು, ಮಹಿಳೆಯರು ಪೂರ್ಣಕುಂಭ ಹೊತ್ತು ಭಾಗವಹಿಸಿದ್ದಾರೆ. ಪೂರ್ಣಕುಂಭ ಮೆರವಣಿಗೆಗೆ ಪ್ರಗತಿಪರರು ವಿರೋಧಿಸಿದ್ದರು.

ಕನ್ನಡ ಧ್ವಜ ಸಂಕೇತಿಸುವ ಸೀರೆ ರವಿಕೆ ತೊಟ್ಟಿರುವ1001 ಮಹಿಳೆಯರು ಪೂರ್ಣ ಕುಂಭಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಕುಂಭ ಹೊತ್ತ ಮಹಿಳೆಯರ ಸಾಲುಗಳ ಹಿಂದೆ ಸಮ್ಮೇಳನ ಅಧ್ಯಕ್ಷರ ಸಾರೋಟು ಸಾಗುತ್ತಿದೆ.

* ಇದನ್ನೂ ಓದಿ:ಮೊದಲು ಕನ್ನಡ, ನಂತರ ಉಳಿದದ್ದು: ಚಂದ್ರಶೇಖರ ಕಂಬಾರ ಸಂದರ್ಶನ

ಸ್ವಸಹಾಯ ಗುಂಪು, ಮಹಿಳಾ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತೆಯರು ಪೂರ್ಣ ಕುಂಭ ಹೊತ್ತಿದ್ದಾರೆ. ಮೆರವಣಿಗೆಯು ಕರ್ನಾಟಕ ಕಾಲೇಜಿನಿಂದ ಆರಂಭಗೊಂಡಿದ್ದು, ಆಲೂರು ವೆಂಕಟರಾವ್ ವೃತ್ತ, ಪಾಲಿಕೆ ವೃತ್ತ, ಡಾ. ಆ್ಯನಿಬೆಸೆಂಟ್ ವೃತ್ತದ ಮೂಲಕ ಪಿ.ಬಿ. ರಸ್ತೆಯಲ್ಲಿ ಸಾಗಿ ಸಮ್ಮೇಳನ ಜರುಗಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣ ತಲುಪಲಿದೆ.

ಪ್ರಗತಿಪರರು ವಿರೋಧಿಸಿದ್ದರು
ಮೆರವಣಿಗೆ ವೇಳೆ 1001 ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆಗೆ ಪ್ರಗತಿಪರರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ಪೂರ್ಣಕುಂಭ ಹೊತ್ತು ಕಿಲೋಮೀಟರ್‌ಗಟ್ಟಲೆ ಬರಿಗಾಲಿನಲ್ಲಿ ಸಾಗುವುದಕ್ಕೆ ಮಹಿಳೆಯರೂ ನಿರಾಕರಿಸಿದ್ದರು.

ಮೆರವಣಿಗೆ ಆರಂಭವಾಗಲಿರುವ ಕರ್ನಾಟಕ ಕಾಲೇಜಿನಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ಸುಮಾರು 5 ಕಿ.ಮೀ. ದೂರ ಇದೆ. ಇಷ್ಟು ದೂರ ಕೊಡ ಹೊತ್ತು ಸಾಗುವುದು ಅಸಾಧ್ಯ ಎಂಬ ಅಭಿಪ್ರಾಯ ಕುಂಭ ಮೆರವಣಿಗೆಗೆ ಆಯ್ಕೆಯಾದ ಮಹಿಳೆಯರಿಂದ ವ್ಯಕ್ತವಾಗಿತ್ತು.

* ಇವನ್ನೂ ಓದಿ...

*ಮೊಳಗಿತು ಕನ್ನಡದ ಕಹಳೆ:ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ

*ಸಾಹಿತ್ಯ ಸಮ್ಮೇಳನದ ಪೂರ್ಣಕುಂಭ ಮೆರವಣಿಗೆಯಲ್ಲಿ ಪುರುಷರಿಗೂ ಅವಕಾಶ: ಮನು ಬಳಿಗಾರ

*ಪೂರ್ಣಕುಂಭ ಸ್ವಾಗತ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.