ಹುಬ್ಬಳ್ಳಿ: ‘ಪ್ರಧಾನಮಂತ್ರಿ ಮೋದಿ ಅವರ ವಿಶೇಷ ಆಸಕ್ತಿಯಿಂದಾಗಿ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಜನೌಷಧ ಕೇಂದ್ರಗಳು ದೇಶದಾದ್ಯಂತ ಆರಂಭಗೊಂಡಿವೆ. ಜನಸಾಮಾನ್ಯರು ಪ್ರಯೋಜನ ಪಡೆಯಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು.

ನಗರದ ಚನ್ನಮ್ಮ ವೃತ್ತದ ಯುರೇಕಾ ಟವರ್ಸ್‌ನಲ್ಲಿ ನೂತನ ಜನೌಷಧ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಡಯಾಬಿಟಿಸ್, ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳಿಗೆ ಅಗತ್ಯವಿರುವ ಔಷಧಗಳು ಜನೌಷಧ ಕೇಂದ್ರದಲ್ಲಿ ಸಿಗುತ್ತವೆ’ ಎಂದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಬೇರೆ ಮೆಡಿಕಲ್‌ಗಳಿಗೆ ಹೋಲಿಸಿದರೆ ಜನೌಷಧ ಕೇಂದ್ರದಲ್ಲಿ ಗುಣಮಟ್ಟದ ಹಾಗೂ ಕಡಿಮೆ ಬೆಲೆಯ ಔಷಧಗಳು ಸಿಗುತ್ತವೆ. ಬೇರೆ ಕಡೆ ದುಬಾರಿ ಹಣ ಕೊಟ್ಟು ಔಷಧ ಖರೀದಿಸುವ ಬದಲು, ಕೈಗೆಟುಕುವ ದರದಲ್ಲಿ ಇಲ್ಲೇ ಖರೀದಿಸುವುದು ಉತ್ತಮ’ ಎಂದರು.

‘ಗ್ರಾಮೀಣ ಭಾಗದಲ್ಲಿ ಕೇಂದ್ರಗಳನ್ನು ಆರಂಭಿಸುವ ಬೇಡಿಕೆ ಬಂದರೆ, ಸಂಬಂಧಪಟ್ಟ ಇಲಾಖೆಯಿಂದ ಧನ ಸಹಾಯದ ಜೊತೆಗೆ ಪ್ರೋತ್ಸಾಹ ದೊರೆಯುತ್ತದೆ ಎಂದರು.

ಬಿಜೆಪಿ ಮುಖಂಡ ರಂಗಾ ಬದ್ಧಿ, ಎಸ್‌ಎಸ್‌ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠ ಜಡಿ, ಭಾಸ್ಕರ ಜಿತೂರಿ, ಲಕ್ಷ್ಮಣ ದಲಬಂಜನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.