ಹುಬ್ಬಳ್ಳಿ: ನಗರದಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ನಿರ್ವಹಣೆಯಲ್ಲಿರುವ ಹಲವು ಸಮಸ್ಯೆಗಳ ನಡುವೆಯೇ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ 2022ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಗಾರ್ಬೇಜ್ ಫ್ರಿ ಸಿಟಿ ಐದು ಸ್ಟಾರ್ಗೆ ಅರ್ಜಿ ಸಲ್ಲಿಸಿದೆ.

ಪಾಲಿಕೆಯು ಈಗಾಗಲೇ ಮೂರು ಸ್ಟಾರ್ ಗಳಿಸಿದ್ದು, ಈ ಬಾರಿ ಐದು ಸ್ಟಾರ್ ಗಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ನಡುವೆ ಒಡಿಎಫ್ ಪ್ಲಸ್ ಪ್ಲಸ್ (ನಗರದ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳು ಸ್ವಚ್ಛವಾಗಿರುಬೇಕು. ಶೌಚಾಲಯದಲ್ಲಿ ಸಾಬೂನು, ಟವೆಲ್ ಮತ್ತು ಮಕ್ಕಳಿಗೆ ಅನುಕೂಲಕರ ಶೌಚಾಲಯ ಸೇರಿದಂತೆ ಹಲವು ಮಾನದಂಡದ ಮೇಲೆ ನೀಡುವ) ಪ್ರಮಾಣ ಪತ್ರಕ್ಕೂ ಪಾಲಿಕೆ ಅರ್ಜಿ ಸಲ್ಲಿಸಿದೆ. ಈ ಪ್ರಮಾಣ ಪತ್ರ ಸಿಕ್ಕರೆ ಮಾತ್ರ ಪಾಲಿಕೆ 5ಸ್ಟಾರ್ಗೆ ಅರ್ಹತೆ ಲಭಿಸಲಿದೆ.

ನಿರ್ವಹಣೆ ಕೊರತೆ: ಉತ್ತಮ ರ್ಯಾಂಕಿಂಗ್, ಸ್ಟಾರ್ ಗಳಿಸುವುದರ ಹೊರತಾಗಿಯೂ ಪಾಲಿಕೆ ಹಲವು ಸುಧಾರಣೆ ಅಳವಡಿಸಿಕೊಳ್ಳಬೇಕಿದೆ. ಪ್ರಾಥಮಿಕ ಹಂತದಲ್ಲಿ ಹಸಿ ಮತ್ತು ಒಣಕಸ ವಿಂಗಡಣೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಬ್ಲಾಕ್ಸ್ಪಾಟ್ (ಎಲ್ಲೆಂದರಲ್ಲಿ ಕಸ ಎಸೆಯುವುದು) ತಪ್ಪಿಸುವುದು ಮತ್ತಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ.

ಕಳೆದ ಬಾರಿ ಉತ್ತಮ ರ್ಯಾಂಕಿಂಗ್: ಸ್ವಚ್ಛ ಸರ್ವೇಕ್ಷಣ –2021ನೇ ಸಾಲಿನ ಅಭಿಯಾನದಲ್ಲಿ ಪಾಲಿಕೆಗೆ ಗಾರ್ಬೇಜ್ ಫ್ರಿ ಸಿಟಿ (ಕಸಮುಕ್ತ ನಗರ) 3 ಸ್ಟಾರ್ ಹಾಗೂ ಕಸ ನಿರ್ವಹಣೆ ಹಾಗೂ ಕಸ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಿರುವುದಕ್ಕೆ ‘ವೇಗವಾಗಿ ಅಭಿವೃದ್ಧಿ ಆಗುತ್ತಿರುವ ಮಧ್ಯಮ ನಗರ’ ಎಂಬ ಪ್ರಶಸ್ತಿಗಳು ಲಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.