ಧಾರವಾಡ: ‘ಸರಳತೆ, ಸಜ್ಜನಿಕೆ ಮತ್ತು ಪ್ರಾಮಾಣಿಕತೆಗೆ ಪರ್ಯಾಯ ಎನ್ನುವಂತಿದ್ದ ಮೊಹರೆ ಹಣಮಂತರಾಯರು ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ಸಂಪಾದಕ’ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಬಣ್ಣಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಿದ್ದ ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೊಡ್ಡ ಪತ್ರಿಕೆಯ ಸಂಪಾದಕರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದರೂ ಅವರು, ಒಂದು ಮನೆ ಕೂಡ ಕಟ್ಟಿಕೊಳ್ಳಲಿಲ್ಲ. ಇದು ಅವರ ಪ್ರಾಮಾಣಿಕತೆ ಮತ್ತು ಸರಳತೆಗೆ ಸಾಕ್ಷಿ. ಅವರ ಆದರ್ಶಗಳು ಇಂದು ಎಲ್ಲರಿಗೂ ಮಾದರಿ’ ಎಂದರು.

’ಒಂದು ಕಾಲದಲ್ಲಿ ಸಮಾಜದ ಕನ್ನಡಿಯಾಗಿದ್ದ ಪತ್ರಿಕಾ ಕ್ಷೇತ್ರ ಇಂದು ಉದ್ಯಮವಾಗಿದೆ. ಪತ್ರಕರ್ತರು ಹಣದ ದಾಸರಾಗಿ ಕೆಲಸ ಮಾಡಬಾರದು, ಗುಣದ ದಾಸರಾಗಿ ಕೆಲಸ ಮಾಡಬೇಕಿದೆ. ಇರುವಷ್ಟು ದಿನ ಸಮಾಜಕ್ಕೆ ಉಪಯೋಗಿಯಾಗಿ ಕೆಲಸ ಮಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಿ’ ಎಂದು ಹೇಳಿದರು.

ಕುಲಸಚಿವ ಪ್ರೊ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ‘ಮೊಹರೆ ಹಣಮಂತರಾಯರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಡಾ.ಪುಟ್ಟಪ್ಪ ಅವರು ನಾಡು ಕಂಡ ಶ್ರೇಷ್ಠ ಪತ್ರಕರ್ತರು. ಕನ್ನಡ ಭಾಷೆ, ಸಂಸ್ಕೃತಿ ಇತಿಹಾಸ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದವರು. ಅವರ ಅನುಭವ ಮುಂದಿನ ಪೀಳಿಗೆಯ ಪತ್ರಕರ್ತರಿಗೆ ಮಾರ್ಗದರ್ಶಿಯಾಗಬೇಕು’ ಎಂದರು.

ವಿಭಾಗದ ಮುಖ್ಯಸ್ಥ ಡಾ.ಜೆ.ಎಂ.ಚಂದುನವರ, ಡಾ.ನಾಗರಾಜ ಹಳ್ಳಿಯವರ, ಭೀಮರಾಯ ದೇಸಾಯಿ, ಕಾವ್ಯಾ ಭಟ್ಟ ಇದ್ದರು.

ಮೊಹರೆ ಹಣಮಂತರಾಯರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡ ಪುಟ್ಟಪ್ಪ ಅವರು ನಾಡು ಕಂಡ ಶ್ರೇಷ್ಠ ಪತ್ರಕರ್ತರು – ಪ್ರೊ. ಮಲ್ಲಿಕಾರ್ಜುನ ಪಾಟೀಲ, ಕುಲಸಚಿವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.