ಗದಗ: ‘ಪಾರಂಪರಿಕ ಲಕ್ಕುಂಡಿ ಕ್ಷೇತ್ರದ ಅನ್ವೇಷಣೆ ಮೂಲಕ ಇತಿಹಾಸ ತಿಳಿದು, ಲಭ್ಯವಿರುವ ಪ್ರಾಚ್ಯವಸ್ತುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಪ್ರವಾಸೋದ್ಯಮ ಇಲಾಖೆ, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಲಕ್ಕುಂಡಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ನಿಮಿತ್ತ ಅಧಿಕಾರಿಗಳು ಹಾಗೂ ಸ್ವಯಂ ಸೇವಕರಿಗೆ ಶುಕ್ರವಾರ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಲಕ್ಕುಂಡಿಯ ಮನೆಗಳು, ಅಂಗಳ, ತಿಪ್ಪೆಗಳಲ್ಲಿ ಸ್ಮಾರಕಗಳು ಇವೆ. ಜನರಿಗೆ ಅದರ ಬಗ್ಗೆ ಅರಿವಿಲ್ಲ. ಹೀಗಾಗಿ ಅವರ ಬಳಿ ಲಭ್ಯವಿರುವ ಶಾಸನ, ಶಿಲೆ, ಸ್ಮಾರಕ, ನಾಣ್ಯ ಸೇರಿದಂತೆ ಪ್ರಾಚ್ಯವಸ್ತುಗಳನ್ನು ಅವರಿಂದ ಪಡೆದುಕೊಂಡು ಸಂಗ್ರಹಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ. ಲಕ್ಕುಂಡಿಗೆ ತೆರಳಿ ಸಚಿವರ ಸಂದೇಶಪತ್ರವನ್ನು ನೀಡಿ ಯಾವ ಓಣಿಗಳಲ್ಲಿ ಯಾರ ಮನೆಗಳಲ್ಲಿ ಸ್ಮಾರಕಗಳು ಲಭ್ಯವಿದೆ ಎನ್ನುವ ಮಾಹಿತಿ ಕಲೆ ಹಾಕಿ, ಪಟ್ಟಿಮಾಡಿ ಅಂತಹ ಮನೆಗಳನ್ನು ಗುರುತು ಮಾಡಬೇಕು’ ಎಂದು ಹೇಳಿದರು.

‘ಸಚಿವರು, ಅಧಿಕಾರಿಗಳು, ಸ್ವಯಂ ಸೇವಕರನ್ನು ಒಳಗೊಂಡ ತಂಡದ ಜೊತೆಗೆ ಈಗಾಗಲೇ ಗುರುತು ಮಾಡಿರುವ ಮನೆಗಳಿಗೆ ಹೋಗಿ ಪ್ರಾಚ್ಯವಸ್ತುಗಳನ್ನು ನೀಡುವ ಬಗ್ಗೆ ರಸೀದಿ ನೀಡಿ ಪುರಾತನ ವಸ್ತುಗಳ ಭಾರದ ಆಧಾರದ ಮೇಲೆ ಅವುಗಳನ್ನು ಪಾಲಕಿಯಲ್ಲಿ, ಟ್ರ್ಯಾಕ್ಟರ್ಗಳಲ್ಲಿ ಸಂಗ್ರಹಿಸುವ ಕಾರ್ಯವಾಗಬೇಕು’ ಎಂದು ಹೇಳಿದರು.

‘ಈ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯವು ವಿದ್ಯಾರ್ಥಿ ಜೀವನದಲ್ಲಿಯೇ ಅತ್ಯುತ್ತಮ ಪ್ರಾಯೋಗಿಕ ಮತ್ತು ಉತ್ತಮ ಅನುಭವ ನೀಡುವ ಕೆಲಸವಾಗಲಿದೆ. ವಿದ್ಯಾರ್ಥಿಗಳು ಈ ಸಮಯವನ್ನು ಸದ್ಬಳಕೆ ಮಾಡಿಕೊಂಡು ಎಲ್ಲರಿಗೂ ಸಹಕಾರ ನೀಡಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕಿ ಸ್ಮಿತಾ ಮಾತನಾಡಿ, ‘ರಾಜರ ಕಾಲದಲ್ಲಿ ಲಕ್ಕುಂಡಿಯಲ್ಲಿ ಟಂಕಸಾಲೆ ಇತ್ತು ಎಂದು ಶಾಸನಗಳಲ್ಲಿ ಉಲ್ಲೇಖವಿದೆ. ಲಕ್ಕುಂಡಿಯಲ್ಲಿ ಮಹತ್ವ ಹಾಗೂ ಮೌಲ್ಯಯುತವಾದ ಶಾಸನ, ನಾಣ್ಯ, ಸ್ಮಾರಕ ಸಂಪತ್ತಿದೆ. ಮಣ್ಣಿನಲ್ಲಿ ಹುದುಗಿಹೋಗಿರುವುದನ್ನು ಮರಳಿ ತೆಗೆಯುವ ಕಾರ್ಯ ಆಗಬೇಕು. ಕಣ್ಣಿಗೆ ಕಾಣುವ ಶಾಸನ, ಶಿಲ್ಪಕಲೆ ದೇವಾಲಯ ಕುರಿತು ಸ್ಥಳೀಯರಿಗೆ ಇರುವ ಮಾಹಿತಿ ಅವರ ಆಚರಣೆಯನ್ನು ದಾಖಲಿಸಿಕೊಂಡು ಪ್ರತಿಯೊಬ್ಬರ ಸಹಕಾರದಿಂದ ಸಂಗ್ರಹಿಸಬೇಕು. ಅವುಗಳನ್ನೆಲ್ಲಾ ವಸ್ತುಸಂಗ್ರಹಾಲಯದಲ್ಲಿರಿಸಿ ಜಾಗತಿಕವಾಗಿ ಲಕ್ಕುಂಡಿಯ ಬಗ್ಗೆ ಗಮನ ಸೆಳೆದು ವಿಶ್ವದ ಪ್ರಸಿದ್ಧ ತಾಣವಾಗಿ ಮಾಡುವ ಕಾರ್ಯವಾಗಬೇಕು’ ಎಂದು ಹೇಳಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿದರು.

ಎನ್ಎಸ್ಎಸ್, ಎನ್ಸಿಸಿ, ಸ್ವಯಂ ಸೇವಕರು, ಪ್ರವಾಸಿ ಗೈಡ್, ಇತಿಹಾಸ ಉಪನ್ಯಾಸಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.