ಗದಗ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಶನಿವಾರ ಇಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ಸಿದ್ಧಲಿಂಗ ನಗರದ ಅಂಬಾಭವಾನಿ ದೇವಸ್ಥಾನದ ಸಮೀಪ ಬೈಕ್ ರ್ಯಾಲಿಗೆ ಶಾಸಕ ಸಿ.ಸಿ. ಪಾಟೀಲ ಚಾಲನೆ ನೀಡಿದರು. ಇಲ್ಲಿಂದ ಮುಳಗುಂದ ನಾಕಾ, ವೀರನಾರಾಯಣ ದೇವಸ್ಥಾನ, ಹಳೆ ಬಸ್ ನಿಲ್ದಾಣ, ಪಾಲಾ ಬದಾಮಿ ರಸ್ತೆ, ಬೆಟಗೇರಿ ಬಸ್ ನಿಲ್ದಾಣದ ಮೂಲಕ ಟರ್ನಲ್ ಪೇಟೆಯ ಶ್ರೀರಾಮ ಮಂದಿರದವರೆಗೆ ರ್ಯಾಲಿ ನಡೆಯಿತು.

ಮೆರವಣಿಗೆಯಲ್ಲಿ ಅಲಂಕೃತ ವಾಹನದಲ್ಲಿ ರಾಮನ ವೇಷಧಾರಿ ಗಮನ ಸೆಳೆದರು. ರ್ಯಾಲಿ ಹಿನ್ನೆಲೆಯಲ್ಲಿ ಪ್ರಮುಖ ಬೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವಿಶ್ವ ಹಿಂದೂ ಪರಿಷತ್ನ ವಿನಾಯಕ ಹಬೀಬ, ಶ್ರೀನಿವಾಸ ಹುಬ್ಬಳ್ಳಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಪ್ರಶಾಂತ ನಾಯ್ಕ, ಕಿಶನ್ ಮೇರವಾಡೆ, ರಾಜು ಖಾನಪ್ಪನವರ, ಶ್ರೀಕಾಂತ ಕಟವಟೆ, ಕುಬೇರಗೌಡ ಪರ್ವತಗೌಡ, ಮಾರುತಿ ಪವಾರ, ವೀರಣ್ಣ ಹೇಮಾದ್ರಿ, ರಾಘವೇಂದ್ರ ಹಬೀಬ, ಮಹೇಶ ರೋಖಡೆ, ಸುರೇಶ ಹಾದಿಮನಿ, ಬಸವರಾಜ ಕುರ್ತಕೋಟಿ, ರಾಜು ಗದ್ದಿ, ಮಹಾಂತೇಶ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.