ಲಕ್ಷ್ಮೇಶ್ವರ: ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಇನ್ಫೊಸಿಸ್ ಫೌಂಡೇಷನ್ ವತಿಯಿಂದ ನಾಲ್ಕನೇ ವರ್ಷದ ಪುಲಿಗೆರೆ ಉತ್ಸವ ಜ. 4, 5 ಮತ್ತು 6ರಂದು ಜರುಗಲಿದೆ.

ಹಿನ್ನೆಲೆ: ಈಗಿನ ಲಕ್ಷ್ಮೇಶ್ವರಕ್ಕೆ ಹಿಂದೆ ಪುಲಿಗೆರೆ, ಪುರಿಕರ ನಗರ, ಪುಲಿಕಾನಗರ ಎಂಬ ಹೆಸರುಗಳಿಂದ ಕರೆಯುತ್ತಿದರು. ಆದರೆ ಲಕ್ಷ್ಮಣೇಶ್ವರ ಎಂಬ ರಾಜನು ಇಲ್ಲಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ಲಕ್ಷ್ಮಣೇಶ್ವರ ಎಂಬ ಹೆಸರು ಬಂದಿತು. ಮುಂದೆ ಇದೇ ಲಕ್ಷ್ಮೇಶ್ವರ ಆಗಿದೆ ಎಂದು ತಿಳಿದು ಬರುವ ಸಂಗತಿ.

10ನೇ ಶತಮಾನದಲ್ಲಿ ನಿರ್ಮಾಣವಾದ ಸೋಮೇಶ್ವರ ದೇವಾಲಯ ಸುಂದರವಾದ ಶಿಲ್ಪಕಲಾ ವೈಭವ ಒಳಗೊಂಡಿದೆ. ಚಾಲುಕ್ಯ ಶಿಲ್ಪಕಲೆಯ ಪರಂಪರೆ ಇಲ್ಲಿ ಮೈದಳೆದು ನಿಂತಿದೆ. ಗರ್ಭಗುಡಿಯಲ್ಲಿನ ನಂದಿ ಮೇಲೆ ಕುಳಿತ ಶಿವಪಾರ್ವತಿಯರ ಮೂರ್ತಿ ನಯನ ಮನೋಹರವಾಗಿದೆ. ಇದನ್ನು ಶಿವಶರಣ ಆದಯ್ಯ ಸೌರಾಷ್ಟ್ರದಿಂದ ತಂದು ಸ್ಥಾಪಿಸಿದನೆಂದು ದಾಖಲೆಗಳಲ್ಲಿ ಉಲ್ಲೇಖವಾಗಿದೆ.

21 ಎಕರೆ ವಿಸ್ತಿರ್ಣದ ದೇವಸ್ಥಾನದಲ್ಲಿ ಸೋಮತೀರ್ಥ, ಓಕುಳಿಹೊಂಡ ಸೇರಿ ಅನೇಕ ದೇವಾಲಯಗಳು ಇವೆ. ನಕ್ಷತ್ರಾಕಾರದ ದೇವಾಲಯದ ಸುತ್ತ ಭೈರವಿ, ಶಿವ, ವಿಷ್ಣು, ಶಕ್ತಿ, ನಟರಾಜ, ಗಣೇಶ, ವೀರಭದ್ರ, ವೇಣುಗೋಪಾಲ ಶಿಲ್ಪಗಳನ್ನು ಅಲ್ಲಲ್ಲಿ ಕೆತ್ತಲಾಗಿದೆ. ಶಿಖರದ ದಕ್ಷಿಣ ಭಾಗದಲ್ಲಿ ಬ್ರಹ್ಮ, ಯಕ್ಷರನ್ನೂ, ಪಶ್ಚಿಮ ಭಾಗದಲ್ಲಿ ಶಕ್ತಿ, ಸರಸ್ವತಿಯರನ್ನೂ ಉತ್ತರ ದಿಕ್ಕಿನಲ್ಲಿ ಶಿವನ ಮೂರ್ತಿಗಳನ್ನು ಕಾಣಬಹುದು.

ಜೀರ್ಣೋದ್ಧಾರ: ಶಿಲ್ಪಕಲೆಯನ್ನೇ ಒಡಲಲ್ಲಿ ಇಟ್ಟುಕೊಂಡ ಸೋಮೇಶ್ವರ ದೇವಾಲಯ ಶಿಥಿಲಾವಸ್ಥೆ ತಲುಪಿತ್ತು. ಇದನ್ನರಿತ ಇನ್ಫೊಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ₹ 5 ಕೋಟಿ ವೆಚ್ಚದಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ನಾಲ್ಕು ವರ್ಷದ ಹಿಂದೆ ಲೋಕಾರ್ಪಣೆ ಮಾಡಿದರು. ಅಂದಿನಿಂದ ಪ್ರತಿವರ್ಷ ದೇಗುಲದ ಆವರಣದಲ್ಲಿ ಪುಲಿಗೆರೆ ಉತ್ಸವ ಆಚರಿಸಲು ನಿರ್ಧರಿಸಲಾಯಿತು. ಪ್ರಸಕ್ತ ನಾಲ್ಕನೇ ವರ್ಷದ ಪುಲಿಗೆರೆ ಉತ್ಸವ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.