ಹಾಸನ: ರಾಜ್ಯದ ಮೂರು ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಇಡೀ ರಾಜ್ಯದ ಜನರ ಅಭಿಪ್ರಾಯ ವಾಗಿದ್ದು,ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಕ್ರಮ, ಗ್ಯಾರೆಂಟಿಗಳಿಗೆ ಸಿಕ್ಕಿರುವ ಮನ್ನಣೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಉಪಚುನಾವಣೆ ಬಹಳ ವಿಶೇಷವಾಗಿತ್ತು. ಒಂದು ಭಾಗದಲ್ಲಿ ಉಪಚುನಾವಣೆ ಆಗಿದ್ದರೆ ತೀರ್ಮಾನ ಬೇರೆ ಬೇರೆ ರೀತಿ ಇರುತ್ತೆ. ಆದರೆ, ಕಲ್ಯಾಣ ಕರ್ನಾಟಕದ ಸಂಡೂರು, ಉತ್ತರ ಕರ್ನಾಟಕದ ಶಿಗ್ಗಾವಿ ಹಾಗೂ ಹಳೇ ಮೈಸೂರು ಭಾಗದ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ಆದ್ದರಿಂದ ಮೂರು ಕ್ಷೇತ್ರಗಳ ತೀರ್ಮಾನ ಒಂದಾಗಿ ಬಂದರೆ ಪರ ಅಥವಾ ವಿರೋಧವಾಗಿರಲಿ. ಅದು ರಾಜ್ಯದ ಜನರ ಅಭಿಪ್ರಾಯ ಎಂದು ನಾವು ಭಾವಿಸಿದ್ದೆವು ಎಂದು ಹೇಳಿದರು.

ಫಲಿತಾಂಶ ನಮ್ಮ ವಿರುದ್ಧ ಬಂದಿದ್ದರೆ ಜನ ನಮ್ಮ ಪರವಾಗಿದ್ದಾರೆ ಎಂದು ಹೇಳಲು ಆಗುತ್ತಿರಲಿಲ್ಲ ಆದ್ದರಿಂದ ಈ ಚುನಾವಣೆ ನಮ್ಮ ಸರ್ಕಾರಕ್ಕೆ ಮನ್ನಣೆ ನೀಡಿರುವುದು ಸಾಭೀತಾಗಿದೆ ಎಂದರು.

ವಿರೋಧ ಪಕ್ಷಗಳು ಈ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದವು.ಬೆಳಿಗ್ಗೆಯಿಂದ ಸಂಜೆಯವರೆಗೆ ಆಧಾರರಹಿತ ಆರೋಪ ಮಾಡುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಸರ್ಕಾರ ದುರ್ಬಲಗೊ ಳಿಸಬೇಕು, ಸರ್ಕಾರ ತೆಗೆಯಬೇಕು, ಪಲಿತಾಂಶ ಬಳಿಕ ಸರ್ಕಾರ ಉಳಿಯುವುದಿಲ್ಲ ಎಂದು ಪ್ರಚಾರ ಮಾಡಿದರು ಆದರೂ, ಜನ ಅದಕ್ಕೆ ಮನ್ನಣೆ ಕೊಟ್ಟಿಲ್ಲ ಫಲಿತಾಂಶದ ಮೂಲಕ ದೇವೇಗೌಡರಿಗೆ, ಕುಮಾರಸ್ವಾಮಿ ಜನರು ಉತ್ತರ ನೀಡಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ನವರು ಒಂದು ಜಾತಿಯನ್ನು ಭಾವನಾತ್ಮಕವಾಗಿ ಸೆಳೆಯು ಮತ್ತು ಮೊಮ್ಮಗ ಸಲುವಾಗಿ ಈ ರೀತಿ ಚುನಾವಣೆ ಮಾಡಿದರು,ಜೆಡಿಎಸ್ ಕಾರ್ಯಕರ್ತರಾಗಿದ್ದರೆ ಈ ರೀತಿ ಚುನಾವಣೆ ಮಾಡುತ್ತಿರಲಿಲ್ಲ ಎಂದು ಜನ ಹೇಳುತ್ತಿದ್ದರು ಅದೇ ರೀತಿ ತೀರ್ಪು ಕೊಟ್ಟಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಅವರು ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ಕೊಡಬೇಕು ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು.ವಕ್ಷ್ ವಿಚಾರದಲ್ಲಿ ಬಿಜೆಪಿಯವರು 216 ನೋಟೀಸ್ ಕೊಟ್ಟಿದ್ದರು ಪ್ರಣಾಳಿಕೆಯಲ್ಲಿ ವಕ್ಷ್ ಆಸ್ತಿ ರಕ್ಷಣೆ ಮಾಡ್ತಿನಿ ಅಂಥ ಹೇಳಿದ್ದರು. ಹಿಂದೂಗಳಿಗೆ ಮಾತ್ರ ಮತ ಹಾಕಿ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಅನೇಕ ಪ್ರಯತ್ನ ಮಾಡಿದರು ಇದೀಗಾ ಇಡೀ ರಾಜ್ಯದ ಜನ ಮೂರು ಉಪಚುನಾವಣೆಗಳ ಮೂಲಕ ಸಮಂಜಸವಾದ ಉತ್ತರ ಕೊಟ್ಟಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಸರ್ಕಾರ ಹಣದ ಹೊಳೆ ಹರಿಸಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಆ ಜಾಗದಲ್ಲಿ ಯಾರಿದ್ದರೂ ಹಾಗೇ ಹೇಳೋದು, ಅವರು ಚನ್ನಪಟ್ಟಣದಲ್ಲಿ ಏನು ಮಾಡಿದರು ಎಲ್ಲರಿಗೂ ಗೊತ್ತಿದೆ ಎಂದರು.

ಚನ್ನಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಒಂದಾಗಿದ್ದು ನಮಗೆ ಅನುಕೂಲವಾಯ್ತು. ಅದೇ ರೀತಿ ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮಾಯಿ ಹಣದ ಹೊಳೆ ಹರಿಸಿದರೂ ಅವರಿಗೆ ಗೆಲುವು ಸಿಗಲಿಲ್ಲ. ಸಂಡೂರಿನಲ್ಲಿ ಜನಾರ್ದನ ರೆಡ್ಡಿ ಅವರನ್ನೇ ಕರೆತಂದರೂ ಪ್ರಯೋಜನವಾಗಿಲ್ಲ. ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿದ್ದು, ಜನರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒಪ್ಪಿದ್ದಾರೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ.ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ಗೆ 123 ಸೀಟು ಬರದಿದ್ದರೆ ಪಕ್ಷ ವಿಸರ್ಜಿಸುತ್ತೇನೆ ಅಂದಿದ್ದರು. ಆದರೆ ಹಾಗೆ ಆಗಲಿಲ್ಲ. ಹೀಗಾಗಿ ಮತದಾರರು ಅವರ ಮಾತಿಗೆ ಮರಳಾಗು ವುದಿಲ್ಲ ಎಂದು ಹೇಳಿದರು.

'ಡಿಕೆಶಿ" ಸಿಎಂ ಘೋಷಣೆ:ಉತ್ಸಾಹದ ಮಾತು ಅಷ್ಟೇ

ಕಾಂಗ್ರೆಸ್ ಸಂಭ್ರಮಾಚರಣೆ ವೇಳೆ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಕಾರ್ಯಕರ್ತರ ಘೋಷಣೆ ವಿಚಾರವಾಗಿ ಮಾತನಾಡಿಅವರಿಗೆ ಆಸೆ ಇರುತ್ತೆ ಎಲ್ಲರ ಜೊತೆಯಲ್ಲೂ ಕಾರ್ಯಕರ್ತರು ಇರುತ್ತಾರೆ.ಅವರು ಈಗ ಅಧ್ಯಕ್ಷರಾಗಿದ್ದು ಅದು ಕೇವಲ ಉತ್ಸಾಹದಿಂದ ಆಡುವ ಮಾತುಗಳು ಅಷ್ಟೆಆ ಪ್ರಶ್ನೆ ಅಪ್ರಸ್ತುತ ಎಂದರು.

ಕಾಂಗ್ರೆಸ್ ಪಕ್ಷಕ್ಕೆ 140 ವರ್ಷ ಇತಿಹಾಸವಿದೆ.ಕೇಂದ್ರ ನಾಯಕತ್ವ ಬಹಳ ಗಟ್ಟಿಯಾಗಿದ್ದುಸಂದರ್ಭ ಬಂದಾಗ ಯಾರನ್ನು ಎನೂ ಮಾಡಬೇಕು ಯಾವ ರೀತಿ ಮಾಡಬೇಕು.ಯಾರನ್ನು ಮುಂದುವರಿಸಬೇಕು ಬದಲಾವಣೆ ಮಾಡುವುದು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.

ಕಾರ್ಯಕರ್ತರು ಏನಾದರೂ ಮಾತನಾಡಿದ್ದರು ಸದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ.ಸಿಎಂ-ಡಿಸಿಎಂ ಜೋಡಿ ಅವರು ಒಂದಾಗಿ ಮಾಡಿದ ತಂತ್ರಗಾರಿಕೆಯಿಂದ ಈ ಫಲಿತಾಂಶ ಬಂದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.