ಬೇಲೂರು: ಭಾರತದಲ್ಲಿ ಉದಯವಾದ ಬೌದ್ಧ ಧರ್ಮವು ಇಲ್ಲಿ ತನ್ನ ನೆಲೆ ಕಳೆದು ಕೊಂಡರೂ ನೆರೆಯ ದೇಶಗಳಲ್ಲಿ ತನ್ನ ಪ್ರಾಬಲ್ಯ ಹೊಂದಿದೆ ಎಂದು ಸಮತಾ ಸೈನಿಕ ದಳ ಹಾಗೂ ಭಾರತ ರಾಷ್ಟ್ರ ಅಭಿಯಾನ ಸಮಿತಿ ಮುಖಂಡ ಸುರೇಂದ್ರ ಬೆಳಾವೆ ಹೇಳಿದರು.

ಸಂವಿಧಾನ ಉಳಿಸಿ, ಬೌದ್ಧ ಧರ್ಮ ಬೆಳೆಸಿ ಎಂಬ ಆಶೋತ್ತರಗಳೊಂದಿಗೆ ಮಹಾರಾಷ್ಟ್ರದ ನಾಗಪುರದಲ್ಲಿನ ಸಮತ ಸೈನಿಕ ದಳ ಹಾಗೂ ಭಾರತ ರಾಷ್ಟ್ರ ಅಭಿಯಾನ ಸಮಿತಿ ಕಾರ್ಯಕರ್ತರು ಬೈಕ್ ಜಾಥಾದ ಮೂಲಕ ಸೋಮವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಲ್ಲಿನ ಬಿ.ಆರ್.ಅಂಬೇಡ್ಕರ್ ಪ್ರತಿಭೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ನಾವುಗಳು ಅಂಬೇಡ್ಕರ್ ಅವರ ಆಶಯದಂತೆ ದೇಶದ ಮೂಲ ನಿವಾಸಿಗಳಿಗೆ ಬೌದ್ಧ ಧರ್ಮದ ಆಚರಣೆ ಹಾಗೂ ಸಂವಿಧಾನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಉದ್ದೇಶವಾಗಿದೆ. ಅಂಬೇಡ್ಕರ್ ಅವರು ಸ್ಥಾಪಿಸಿದ ಸಮತಾ ಸೈನಿಕ ದಳ ಹಾಗೂ ಭಾರತ ರಾಷ್ಟ್ರ ಅಭಿಯಾನ ಸಮಿತಿ ಸಂಘಟನೆ ನೇತೃತ್ವದಲ್ಲಿ ಸಂವಿಧಾನ ಉಳಿಸಿ ಬೌದ್ಧ ಧರ್ಮ ಬೆಳಸಿ ಎಂಬ ಘೋಷಣೆಯೊಂದಿಗೆ ಡಿಸೆಂಬರ್ 1 ರಂದು ಮಹಾರಾಷ್ಟ್ರದ ನಾಗಪುರದ ದೀಕ್ಷಾ ಭೂಮಿಯಿಂದ 30 ಜನರ ತಂಡದ ಬೈಕ್ ಜಾಥಾವು ಪ್ರಾರಂಭಗೊಂಡಿದೆ. ದಕ್ಷಿಣ ಭಾರತದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ರಾಜ್ಯದಲ್ಲಿ ಸಂಚರಿಸುತ್ತಿದ್ದು, ಡಿಸೆಂಬರ್ 31 ರಂದು ತಮಿಳುನಾಡಿನ ರಾಮೇಶ್ವರದಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಿದರು.

ನಾವು ಬೇಲೂರಿಗೆ ಆಗಮಿಸಿದ ಸಂದರ್ಭ ಇಲ್ಲಿನ ಗಾಂಧಾರ ಬುದ್ಧ ವಿಹಾರದ ಗಣ್ಯರು ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಿದ್ದಾರೆ. ಎಲ್ಲ ವರ್ಗದವರು ಸೇರಿ ಅಂಬೇಡ್ಕರ್ ಅವರ ಆಶಯಗಳನ್ನು ಗೌರವಿಸಿ ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು. ಗಾಂಧಾರ ಬುದ್ಧ ವಿಹಾರದ ಉಪಾಧ್ಯಕ್ಷ ಮೊಗಸಾವರ ಮಂಜುನಾಥ್ ಮಾತನಾಡಿದರು.

ಮಹಾರಾಷ್ಟ್ರದ ನಾಗಪುರದಲ್ಲಿನ ಸಮತ ಸೈನಿಕ ದಳ ಹಾಗೂ ಭಾರತ ರಾಷ್ಟ್ರ ಅಭಿಯಾನ ಸಮಿತಿಯ ಸುರಭ ಬಾರಮತೆ, ಪ್ರತೀಕ್ ಸೊಂಟಕ್ಕೆ, ಅಭಯ್ ಲೋಕಂಡೆ, ಹಾಗೂ ಬೇಲೂರಿನ ಗಾಂಧಾರ ಬುದ್ಧ ವಿಹಾರ ಚಾರಿಟೇಬಲ್ ಟ್ರಸ್ಟ್‌ನ ರವಿ ರಾಯಪುರ. ಶಿವಣ್ಣ, ವಕೀಲ ಕುಮಾರ್ ಗುಪ್ತ, ಗಂಗಾಧರ್, ಆಶಾ ಮಂಜುನಾಥ್, ವಿರೂಪಾಕ್ಷ, ರಘು ಶೆಟ್ಟಿಗೆರೆ, ರಂಗಸ್ವಾಮಿ, ಹರೀಶ್, ಎಚ್.ಡಿ.ರಮೇಶ್. ಪ್ರವೀಣ್ ಬೌದ್ಧ, ಪ್ರೇಮ ಗುರುರಾಜ್, ಕುಮಾರ್ ಕೌರಿ, ಲಿಖಿತ್, ಕಾರ್ತಿಕ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.