ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ– ಚಿಕ್ಕಮಗಳೂರು ಸಂಪರ್ಕ ರಸ್ತೆ: ಜಮೀನು ಮಾಲೀಕರಿಂದ ರಸ್ತೆ ಒತ್ತುವರಿ

Published : 30 ಜುಲೈ 2023, 6:39 IST
Last Updated : 30 ಜುಲೈ 2023, 6:39 IST
ಫಾಲೋ ಮಾಡಿ
Comments
ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಳ್ಳಲು ಅಭ್ಯಂತರ ಇಲ್ಲ. ಚರಂಡಿ ಮುಚ್ಚಿ ರಸ್ತೆ ಅಂಚಿನವರೆಗೂ ಬೇಸಾಯ ಮಾಡಿದರೆ ಮಳೆ ನೀರು ಜಮೀನಿಗೆ ನುಗುತ್ತದೆ. ರೈತರು ಅರ್ಥ ಮಾಡಿಕೊಳ್ಳಬೇಕು.
-ಬಸವೇಗೌಡ ರೈತ. ಬೆಳವಾಡಿ
ಒಬ್ಬರನ್ನು ನೋಡಿಕೊಂಡು ಮತ್ತೊಬ್ಬರು ರಸ್ತೆ ಅಂಚಿನವರೆಗೂ ಉಳಿಮೆ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಬೆಳೆ ಮೇಲೆ ವಾಹನಗಳು ಸಂಚರಿಸುವ ಸಾಧ್ಯತೆ ಇದೆ.
-ಕೋದಂಡರಾಮು ವರ್ತಕ ವಡ್ಡರಹಳ್ಳಿ
ವಡ್ಡರಹಳ್ಳಿ ಬೆಳವಾಡಿ ರಸ್ತೆ ಒತ್ತುವರಿ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಂದಾಯ ನಿರೀಕ್ಷಕ ಗ್ರಾಮ ಲೆಕ್ಕಾಧಿಕಾರಿ ಜತೆ ಮಾತನಾಡುತ್ತೇನೆ.
-ಮೋಹನ್‌ಕುಮಾರ್ ಉಪ ತಹಶೀಲ್ದಾರ್ ಹಳೇಬೀಡು
ಪ್ರವಾಸಿ ತಾಣವನ್ನಾಗಿ ಮಾಡಿ
ಪ್ರವಾಸಿ ತಾಣವನ್ನಾಗಿ ಮಾಡಿ ಬೆಳವಾಡಿ ಹಾಗೂ ಹಳೇಬೀಡು ಹೊಯ್ಸಳರ ಕಾಲದ ಐತಿಹಾಸಿಕ ಸ್ಮಾರಕ ಹೊಂದಿದ್ದು ಎರಡೂ ಊರುಗಳು ಪ್ರವಾಸಿ ತಾಣಗಳಾಗಿವೆ. ಪ್ರವಾಸಿಗರು ದೂರದ ರಸ್ತೆಯಲ್ಲಿ ಬೆಳವಾಡಿ ಹಾಗೂ ಹಳೇಬೀಡಿನ ಪ್ರಯಾಣ ಮಾಡುತ್ತಿದ್ದಾರೆ. ಕರೀಕಟ್ಟೆಹಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿಯಾದರೆ ಪ್ರವಾಸಿ ರಸ್ತೆಯಾಗಿ ಮಾರ್ಪಡಿಸಬಹುದು. ಗ್ರಾಮಗಳಲ್ಲಿ ವ್ಯಾಪಾರ ವ್ಯವಹಾರ ಬೆಳೆಸಬಹುದು. ಹಳ್ಳಿಗಳಲ್ಲಿ ಹೋಂ ಸ್ಟೇ ಆರಂಭಿಸಬಹುದು. ನಗರದ ಪ್ರವಾಸಿಗರು ಜಮೀನಿನಲ್ಲಿಯೇ ಕೃಷಿ ಉತ್ಪನ್ನ ಖರೀದಿಸುವಂತಹ ವ್ಯವಸ್ಥೆ ಮಾಡಬಹುದು ಎಂಬುದು ಸ್ಥಳೀಯರ ಒತ್ತಾಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT