ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 14,998 ಚೀಲ (3,749 ಕ್ವಿಂಟಲ್) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.

ಮಾರುಕಟ್ಟೆಗೆ ಕಳೆದ ಸೋಮವಾರ 23,068 ಚೀಲ (5,767 ಕ್ವಿಂಟಲ್) ಮೆಣಸಿನಕಾಯಿ ಆವಕವಾಗಿತ್ತು. ಚುನಾವಣೆ ಬಳಿಕ ಆವಕದಲ್ಲಿ ಹೆಚ್ಚಳವಾಗಬಹುದು ಎನ್ನುವ ವರ್ತಕರ ನಿರೀಕ್ಷೆ ಮತ್ತೆ ಹುಸಿಯಾಗಿದೆ.

ಪ್ರಾಂಗಣದಲ್ಲಿ ಗುರುವಾರ 2,185 ಲಾಟ್ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟವಿಲ್ಲದ 155 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. ಗುಣಮಟ್ಟದ ಕೊರತೆಯಿಂದಾಗಿ ನೋ ಬಿಡ್ ಲಾಟ್‌ಗಳ ಸಂಖ್ಯೆ ಮತ್ತೆ ಹೆಚ್ಚಿದ್ದು, ಅಗತ್ಯಕ್ಕಿಂತ ಹೆಚ್ಚು ನೀರು ಸಿಂಪರಣೆ ಮಾಡದೆ ಒಣಪಡಿ ಮೆಣಸಿನಕಾಯಿ ಮಾರಾಟಕ್ಕೆ ತಂದಲ್ಲಿ ಮಾತ್ರ ಸ್ಪರ್ಧಾತ್ಮಕ ಬೆಲೆ ಸಿಗಲಿದೆ.

ಎರಡು ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹38,100 ರಂತೆ, ಎರಡು ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹28,699ರಂತೆ ಮತ್ತು ಗುಂಟೂರು ತಳಿ ₹17,529 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಬ್ಯಾಡಗಿ ಡಬ್ಬಿ ಮೆಣಸಿಕಾಯಿ ಗರಿಷ್ಠ ಬೆಲೆಯಲ್ಲಿ ಕಳೆದ ಸೋಮವಾರಕ್ಕಿಂತ ₹4 ಸಾವಿರ ಹೆಚ್ಚಳವಾಗಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹28,799, ಬ್ಯಾಡಗಿ ಕಡ್ಡಿ ₹24,679 ಹಾಗೂ ಗುಂಟೂರ ತಳಿ ₹11,629 ರಂತೆ ಮಾರಾಟವಾಗಿವೆ.

ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 182 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.