ಹಿರೇಕೆರೂರು (ಹಾವೇರಿ ಜಿಲ್ಲೆ): ಮಾಸೂರು ಗ್ರಾಮದ ಸಮೀಪ ಕುಮದ್ವತಿ ನದಿ ದಡದಲ್ಲಿ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು ಜಿಲ್ಲೆ ಆನೇಕಲ್‌ನ ಮಂಜುನಾಥ ರಾಮಣ್ಣ, ತುಮಕೂರು ಜಿಲ್ಲೆ ಸತ್ಯಮಂಗಲದ ಕೃಷ್ಣಪ್ಪ ರಾಮಕೃಷ್ಣಯ್ಯ, ಸಂಕಾಪುರದ ನಾರಾಯಣ ನಾರಾಯಣಪ್ಪ, ಗೋಲೂರಿನ ಲೋಕೇಶ ಲಕ್ಷ್ಮಯ್ಯ ಸಂಕಾಪುರ, ಸತ್ಯಮಂಗಲದ ಹುಲ್ಲೂರಯ್ಯ ಲಕ್ಷ್ಮಯ್ಯ ಬಂಧಿತ ಆರೋಪಿಗಳು.

ಬಂಧಿತರಿಂದ 85 ಮೃತ ಬಾವಲಿಗಳು, ಒಂದು ವಾಹನ, ಬಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಸಿಬ್ಬಂದಿ ಚಮನ್‌ಅಲಿ ಕಾಲೆಖಾನವರ, ವಿ.ಬಿ.ಮೊಹಿತೆ, ಅಬ್ದುಲ್ ಖಾದರ್ ಜಿಲಾನಿ, ಕನಕೇಶ, ಬಸವರಾಜ, ಗುರುಪ್ರಸಾದ, ಪ್ರಶಾಂತ, ಪ್ರವೀಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪಿಎಸ್ಐ ನೇಮಕಾತಿ: ದೈಹಿಕ ಸಾಮರ್ಥ್ಯ ಪರೀಕ್ಷೆ, ಎರಡೂವರೆ ತಿಂಗಳ ಗರ್ಭಿಣಿ ಯಶಸ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.