ಬ್ಯಾಡಗಿ: ಬೇಡರು ವಾಸಿಸುತ್ತಿದ್ದ ಕಾರಣಕ್ಕೆ ‘ಬ್ಯಾಡರಹಳ್ಳಿ’ ಎಂದು ಕರೆಯಲ್ಪಟ್ಟ ಊರೊಂದು ಈಗ ‘ಬ್ಯಾಡಗಿ’ ಆಗಿ ರೂಪಾಂತರಗೊಂಡಿದೆ. ಈ ಊರು ಮೆಣಸಿನಕಾಯಿ ಮಾರುಕಟ್ಟೆಯ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ.

ಪ್ರಮುಖ ವ್ಯಾಪಾರಿ ಪಡಮೂಲೆಯಂತಿದ್ದ ಬ್ಯಾಡಗಿಯಲ್ಲಿ, ಈ ಹಿಂದೆ ಕಿರಾಣಿಯಿಂದ ಹಿಡಿದು ಒಣ ಮೆಣಸಿನಕಾಯಿ, ಅಡಿಕೆ, ಬೆಳ್ಳುಳ್ಳಿ, ಬೆಲ್ಲ, ಶೇಂಗಾ ಉಂತಾದ ಕೃಷಿ ಉತ್ಪನ್ನಗಳ ಮಾರಾಟ ನಡೆಯುತ್ತಿತ್ತು. ಆದರೆ, ಈಗ ಒಣ ಮೆಣಸಿನಕಾಯಿ ವಹಿವಾಟು ಮಾತ್ರ ನಡೆಯುತ್ತಿದೆ. ವಾರ್ಷಿಕ ₹1,500 ಕೋಟಿಗೆ ತನ್ನ ವಹಿವಾಟು ಹೆಚ್ಚಿಸಿಕೊಂಡಿದೆ. ಎಪಿಎಂಸಿ ಮಾರುಕಟ್ಟೆಯು 74 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಸುಮಾರು 1,500ಕ್ಕೂ ಹೆಚ್ಚು ಖರೀದಿ ಹಾಗೂ ದಲಾಲಿ ವರ್ತಕರು ನೋಂದಾಯಿಸಿಕೊಂಡಿದ್ದಾರೆ.

ಅಡುಗೆಗೆ ಮಾತ್ರ ಬಳಕೆಯಾಗುತ್ತಿದ್ದ ಮೆಣಸಿನಕಾಯಿಯಲ್ಲಿನ ಒಲಿಯೋ ರೆಜಿನ್ ಎಂಬ ದ್ರಾವಣದ ಉತ್ಪಾದನೆ ಆರಂಭವಾದ ಬಳಿಕ ವಿದೇಶಿ ಮಾರುಕಟ್ಟೆಗೆ ಪ್ರವೇಶಿಸಿತು. ದೇಶ ವಿದೇಶಗಳಿಗೆ ಇಲ್ಲಿಯ ಮೆಣಸಿನಕಾಯಿ ರಫ್ತಾಗುತ್ತಿದೆ. ಬ್ಯಾಡಗಿ ಮೆಣಸಿನಕಾಯಿಯಲ್ಲಿ ಇರುವ ವಿಶಿಷ್ಟ ಸ್ವಾದ, ಕಡುಗೆಂಪು ಬಣ್ಣ ಹಾಗೂ ರುಚಿಯಿಂದಾಗಿ ವಿದೇಶಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೆಣಸಿನಕಾಯಿಗೆ ಮೂಲ ಬಣ್ಣವನ್ನು ಕಾಯ್ದುಕೊಳ್ಳಲು 23 ಕೋಲ್ಡ್ ಸ್ಟೋರೇಜ್‌ಗಳು ಪಟ್ಟಣದಲ್ಲಿ ತಲೆ ಎತ್ತಿವೆ. ಅಂದಿನ ಬೇಡರ ಹಳ್ಳಿಯು ಈಗ ‘ಮೆಣಸಿಕಾಯಿ’ ಮೂಲಕ ಗುರುತಿಸಿಕೊಂಡಿದೆ. ಒಟ್ಟಾರೆ, ಮಸಾಲಾ ಮಾರುಕಟ್ಟೆಯಲ್ಲಿ ‘ಬ್ಯಾಡಗಿ’ಯದ್ದೇ ಸುದ್ದಿ.

ಮುಂಬೈ ಸರ್ಕಾರದ ಅಧೀನದಲ್ಲಿ ‘ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ 1948ರ ಫೆಬ್ರುವರಿ 15ರಂದು ಸ್ಥಾಪನೆಗೊಂಡಿತು. ಅಂದಿನ ಮುಂಬಯಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದು ಮೊರಾರ್ಜಿ ದೇಸಾಯಿಯವರು ಮಾರುಕಟ್ಟೆ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು.

ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಡಿಕೆ ವ್ಯಾಪಾರ ಸಹ ಜೋರಾಗಿ ನಡೆಯುತ್ತಿತ್ತು. ಅಂಗಡಿಗಳ ಮುಂದೆ ಅಡಿಕೆಯನ್ನು ಹರಡಿ ವಹಿವಾಟು ನಡೆಸಲಾಗುತ್ತಿತ್ತು. ತದನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವರ್ಗವಣೆಗೊಂಡ ಬಳಿಕ ಮೆಣಸಿನಕಾಯಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.