ಹಾವೇರಿ: ದೇಶದಲ್ಲಿ ಆತ್ಮಹತ್ಯೆ ಒಳಗಾಗುವವರ ಪೈಕಿ ಅಪ್ರಾಪ್ತ ವಯಸ್ಕರೇ ಹೆಚ್ಚಾಗಿದ್ದಾರೆ. ಇದಕ್ಕೆ ಒತ್ತಡದ ಜೀವನ ಶೈಲಿ ಕಾರಣವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪುಟ್ಟರಾಜು ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಸೋಮವಾರ ನಗರದ ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಯುವ ಸಮೂಹ ಅನಗತ್ಯ ವಿಷಯಗಳ ಬಗ್ಗೆ ಆಲೋಚಿಸಬಾರದು. ಒತ್ತಡವನ್ನು ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಬೇಕು, ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು, ಕೇವಲ ಅಂಕಗಳೇ ಬದುಕಲ್ಲ ಅದನ್ನು ಹೊರತಾಗಿಯೂ ಸುಂದರವಾದ ಬದುಕು ನಿಮಗಿದೆ’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದುಡುಕಿ ಆತ್ಮಹತ್ಯೆಯಂತಹ ನಿರ್ಧಾರ ತಗೆದುಕೊಂಡು ಜೀವಹಾನಿ ಮಾಡಿಕೊಳ್ಳಬಾರದು’ ಎಂದು ತಿಳಿಸಿದರು.

ಜಿಲ್ಲಾ ವೈದ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಒತ್ತಡಗಳು ಸರ್ವೇ ಸಾಮಾನ್ಯ. ಅಂಕಗಳಿಗೆ ಮಹತ್ವ ನೀಡದಿರಿ. ನಿಮಗೆ ಆಸಕ್ತಿ ಇರುವ ಕ್ಷೇತ್ರದ ಬಗ್ಗೆ ಗುರಿ ಇರಿಸಿ ಶ್ರದ್ಧೆಯಿಂದ ಓದಿದರೆ ಯಶಸ್ವಿಯಾಗಲು ಸಾಧ್ಯ’ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯರಾದ ಡಾ.ವಿಜಯಕುಮಾರ ಬಳಿಗಾರ ‘ಆತ್ಮ ಹತ್ಯೆ ತಡೆಗಟ್ಟುವ ವಿಷಯ ಕುರಿತು ಹಾಗೂ ಪಿ.ಎಸ್.ಐ ಮಾಲತೇಶ ಎಂ.ಎಂ ಕಾನೂನು ಅರಿವು ವಿಷಯ ಕುರಿತು ಉಪನ್ಯಾಸ ನೀಡಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಡಾ.ಚನಬಸಯ್ಯ ವಿರಕ್ತಮಠ ಮಾತನಾಡಿದರು. ಆದರ್ಶ ಶಿಕ್ಷಣ ಸಮಿತಿ ಚೇರಮನ್ ಎಂ.ಸಿ.ಕೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಸಿ.ಬಣಕಾರ, ಕಾರ್ಯದರ್ಶಿ ಈಶ್ವರ ನಂದಿ, ಡಾ.ಚನ್ನಪ್ಪ ಲಮಾಣಿ ಇದ್ದರು.ಪ್ರಾಂಶುಪಾಲ ಪಿ.ಐ. ಗಚ್ಚಿನಮನಿ ಸ್ವಾಗತಿಸಿ, ಅಧ್ಯಾಪಕಿ ರೂಪಾ ಇಟಗಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.