ರಾಣೆಬೆನ್ನೂರು: ‘ಮಾದಕ ದೃವ್ಯ ಸೇವನೆಯಿಂದ ಯುವ ಜನಾಂಗ ದಾರಿ ತಪ್ಪುತ್ತಿದೆ. ತಂಬಾಕು, ಅಪೀಮು, ಗಾಂಜಾ ಸೇರಿದಂತೆ ಮತ್ತಿತರ ದುಶ್ಚಟಗಳಿಂದ ಹೆಚ್ಚು ಸಾವು ಸಂಭವಿಸುತ್ತಿವೆ’ ಎಂದು ಕೇಲಗಾರ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಬಸವರಾಜ ಕೇಲಗಾರ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಮಾದಕ ದ್ರವ್ಯ ವಿರೋಧಿ ದಿನಾಚರಣೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಆರ್ಥಿಕತೆ ಮತ್ತು ಅಭಿವೃದ್ದಿಯ ದುಶ್ಚಟಗಳು ಗಾಢ ಪರಿಣಾಮ ಬೀರಲಿವೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ಒಳಗಾಗಿ ದೇಶದಲ್ಲಿ ದಿನಕ್ಕೆ ಸರಾಸರಿ 2500 ಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ ಎಂಬುವುದು ಅಂಕಿ-ಅಂಶಗಳ ಮೂಲಕ ತಿಳಿದು ಬರುತ್ತದೆ. ಯುವಕರು ಮುಂಜಾಗೃತಾ ಕ್ರಮ ವಹಿಸುವುದು ಅವಶ್ಯ’ ಎಂದು ಎಚ್ಚರಿಸಿದರು.

‘ಜನರಿಗೆ ತಿಳುವಳಿಕೆ ನೀಡಿ ತಂಬಾಕು ಮುಕ್ತ ದೇಶವನ್ನಾಗಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಗೂ ಇದೆ. ಪ್ರಪಂಚದಲ್ಲಿ 8 ರಿಂದ10 ಮಿಲಿಯನ್ ಜನರು ತಂಬಾಕು ಚಟಕ್ಕೆ ದಾಸರಾಗಿದ್ದಾರೆ. ಇದರಿಂದ ನಾನಾ ರೋಗಗಳಿಗೆ ತುತ್ತಾಗುತ್ತಿದ್ದರೂ ಜನರಲ್ಲಿ ತಿಳುವಳಿಕೆ ಬಾರದಿರುವುದು ನೋವಿನ ಸಂಗತಿ’ ಎಂದರು.

ದುಶ್ಚಟಗಳಿಂದ ದೂರವಿದ್ದು, ಶಾಂತಿ, ನೆಮ್ಮದಿ ಹಾಗೂ ಭಾವೈಕ್ಯತೆಯನ್ನು ಸಾಧಿಸುವಂತೆ ಸಲಹೆ ನೀಡಿದರು.

ನಿರ್ಮಲಾ ಬಳಿಗಾರ, ಶಾಂತಾ ಪಲ್ಲಿ, ಉಮೇಶ ಯತ್ತಿನಹಳ್ಳಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.