ಹಿರೇಕೆರೂರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮಾಲಿ ಕಾರ್ಮಿಕರು ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಸಹಾಯ ಹಸ್ತ, ಸ್ಮಾರ್ಟ್ ಕಾರ್ಡ್, ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ, ನಿವೃತ್ತಿ ಪರಿಹಾರ, ವಸತಿ ಯೋಜನೆ, ಅಫಘಾತ ವಿಮೆ ಸೌಲಭ್ಯ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಹಮಾಲಿ ಕಾರ್ಮಿಕರ ಫೆಡರೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಕುರುಬರ, ಕಾರ್ಮಿಕರಲ್ಲಿಯೇ ಅತ್ಯಂತ ಹೆಚ್ಚು ದೈಹಿಕ ಶ್ರಮದಿಂದ ಕೆಲಸ ಮಾಡುವ ಮತ್ತು ವ್ಯಾಪಾರ ವಹಿವಾಟಿನಲ್ಲಿ ಮಹತ್ವದ ಪಾತ್ರವಹಿಸುವವರು ಹಮಾಲರಾಗಿದ್ದಾರೆ ಎಂದರು.

ರಾಜ್ಯದ ಕೃಷಿ ಮಾರುಕಟ್ಟೆ, ಆಯಲ್ ಮಿಲ್, ಅಕ್ಕಿ ಗಿರಣಿ ಸೇರಿದಂತೆ ಹಲವಾರು ಕಡೆಗಳಲ್ಲಿ ಕೆಲಸ ಮಾಡುತ್ತ ಸುಮಾರು ಐದು ಲಕ್ಷ ಜನ ಹಮಾಲರು ಜೀವನ ಸಾಗಿಸುತ್ತಿದ್ದಾರೆ. ಕೃಷಿ ಮಾರುಕಟ್ಟೆಗಳಲ್ಲಿ ರೈತರು ತರುವ ಉತ್ಪನ್ನಗಳನ್ನು ಮತ್ತು ಬಜಾರ್‌ಗಳಲ್ಲಿ ಆಗುವ ದಿನದ ವ್ಯಾಪಾರ ಮತ್ತು ವಹಿವಾಟಿನ ಮೇಲೆ ಇವರ ಬದುಕು ಅವಲಂಬಿತವಾಗಿದ್ದು, ಯಾವುದೇ ರೀತಿಯಲ್ಲಿ ಸಾಮಾಜಿಕ ಭದ್ರತೆ ಇಲ್ಲದೇ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ದೂರಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜಪ್ಪ ಚವಟಗೇರಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಮೇಗೂರ, ಹಮಾಲಿ ಕಾರ್ಮಿಕರಾದ ಮಂಜಪ್ಪ ಚೌಟಗಿ, ಬಸವರಾಜ ಮಾಳಗಿ, ಬಸವರಾಜ ಮೇದೂರ, ರಾಜು ಕರಡಿ, ಆನಂದ ಮಾಳಗಿ, ದುರ್ಗಪ್ಪ ಪರಸನಾಯ್ಕ, ರಶೀದ್ ಕಮದೋಡ, ತಿಪ್ಪಣ್ಣ ಎಲೋದಹಳ್ಳಿ, ವುಮ್ಮರಸಾಬ್ ಬೂಪನಹಳ್ಳಿ, ಸೈಯದ್ ಹುಸೇನ್ ಕಿರುವಾಡಿ, ರಮೇಶ ಬುರಡಿಕಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಿರಸ್ತೇದಾರ ಕೆ.ಜಿ.ಮಠದ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.