ಕಲಬುರಗಿಯ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಕಂಬದ ಸುತ್ತಲೂ ಸುರಕ್ಷತೆ ನಿರ್ಲಕ್ಷಿಸಿ ವ್ಯಾಪಾರದಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಚಿಂಚೋಳಿ ತಾಲ್ಲೂಕಿನ ಕೊರಡಂಪಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪಕ್ಕದಲ್ಲಿಯೇ ವಿದ್ಯುತ್ ಪರಿವರ್ತಕ ಸುರಕ್ಷತಾ ಕ್ರಮವಿಲ್ಲದೇ ಅಪಾಯ ಆಹ್ವಾನಿಸುತ್ತಿದೆ
ಆಳಂದ ಪಟ್ಟಣದ ಮುಖ್ಯರಸ್ತೆ ಪಕ್ಕದ ವಿದ್ಯುತ್ ಪರಿವರ್ತಕ ದಾರಿಹೋಕರಿಗೆ ಅಪಾಯ ಆಹ್ವಾನಿಸುವಂತಿದೆ
ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದ ಯುವರೈತ ಬಸವರಾಜ ಹೆಗಲೇರಿ ಹಾಗೂ ಅವರ ಎತ್ತು ಹೊಲದಲ್ಲಿನ ಜೋತುಬಿದ್ದ ತಂತಿಗೆ ಬಲಿಯಾದ ನೋಟ...– ಪ್ರಜಾವಾಣಿ ಸಂಗ್ರಹ ಚಿತ್ರ
ಕೋಟ್ಯಂತರ ರೂಪಾಯಿ ಖರ್ಚು
ಜೀವಹಾನಿಗೆ ಕಾರಣವಾಗಬಲ್ಲ ಅಪಾಯಕಾರಿ ಸ್ಥಳಗಳನ್ನು ಪತ್ತೆ ಮಾಡಿ ಅಲ್ಲಿ ಸುರಕ್ಷಾ ಕ್ರಮಗಳು ಕೈಗೊಳ್ಳುವ ಕೆಲಸವನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ನಿತ್ಯವೂ ನಿಯಂತ್ರಣ ಕೊಠಡಿಗಳಿಗೆ ಬರುವ ಕರೆಗಳು ಹಾಗೂ ಗಸ್ತು ಸಿಬ್ಬಂದಿ ಗುರುತಿಸುವ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಅಧಿಕಾರಿಗಳು ಹೇಳುತ್ತಾರೆ.
332 ಜನ–ಜಾನುವಾರಿಗೆ ಹಾನಿ
‘ವಿದ್ಯುತ್ ಅವಘಡಗಳಿಂದ ಜೆಸ್ಕಾಂ ವ್ಯಾಪ್ತಿಯಲ್ಲಿ 2023–24ನೇ ಸಾಲಿನಲ್ಲಿ ಅಕ್ಟೋಬರ್ ಅಂತ್ಯದವರೆಗೆ 105 ಜನರಿಗೆ ಹಾಗೂ 227 ಜಾನುವಾರುಗಳಿಗೆ ಹಾನಿಯಾಗಿದೆ. ಈ ಪೈಕಿ ಜೆಸ್ಕಾಂ ನಿರ್ಲಕ್ಷ್ಯದಿಂದ ಮೂವರು ಅಸುನೀಗಿದ್ದು 61 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ವಯಂಕೃತ ನಿರ್ಲಕ್ಷ್ಯದಿಂದ 18 ಮಂದಿ ವಿದ್ಯುತ್ ಅವಘಡಗಳಿಗೆ ಬಲಿಯಾಗಿದ್ದು 23 ಮಂದಿ ಗಾಯಗೊಂಡಿದ್ದಾರೆ. ಇನ್ನುಳಿದಂತೆ 227 ಜಾನುವಾರುಗಳಿಗೆ ಹಾನಿಯಾಗಿದೆ’ ಎಂದು ಜೆಸ್ಕಾಂ ಕಾರ್ಪೊರೇಟ್ ಕಚೇರಿ ಮಾಹಿತಿ ನೀಡಿದೆ. ತಮ್ಮ ಕಡೆಯಿಂದಾದ ನಿರ್ಲಕ್ಷ್ಯಗಳಿಗೆ ಪ್ರಕರಣಗಳ ಗಂಭೀರತೆ ಅನುಗುಣವಾಗಿ ಪರಿಹಾರವನ್ನೂ ಜೆಸ್ಕಾಂ ನೀಡಿದೆ.
ವಿದ್ಯುತ್ ಅವಘಡ ಯಾಕೆ ತಗ್ಗುತ್ತಿಲ್ಲ?
ಅಪಾಯಕಾರಿ ಸ್ಥಳಗಳಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲು ಜೆಸ್ಕಾಂ ಪ್ರತಿವರ್ಷ ಕೋಟ್ಯಂತರ ರೂಪಾಯಿ ವೆಚ್ಚಮಾಡುತ್ತಿದೆ. ಆದರೂ ಅವಘಡಗಳ ಪ್ರಮಾಣ ಯಾಕೆ ತಗ್ಗುತ್ತಿಲ್ಲ? ಹೀಗಾಗಿ ಜೆಸ್ಕಾಂನವರು ಮೂರನೇ ವ್ಯಕ್ತಿಯಿಂದ ಸುರಕ್ಷತಾ ಆಡಿಟ್ ಮಾಡಿಸಿ ಅವರು ಗುರುತಿಸುವ ಅಪಾಯಕಾರಿ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾಕ್ರಮ ಕೈಗೊಳ್ಳಬೇಕು. ದೀಪಕ್ ಗಾಲಾ ಸಾಮಾಜಿಕ ಹೋರಾಟಗಾರ ಕಲಬುರಗಿ
ದುರಸ್ತಿಗೆ ಮೊದಲ ಆದ್ಯತೆ
ಜೇವರ್ಗಿ ಉಪ ವಿಭಾಗದ 84 ಹಳ್ಳಿಗಳ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಲ್ಲಿ ವಿದ್ಯುತ್ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಟಿ.ಸಿಗಳಿಗೆ ಮತ್ತು ಕಂಬಗಳಿಂದ ತಂತಿಗಳು ಜೋತು ಬಿದ್ದ ಬಗ್ಗೆ ಮಾಹಿತಿ ನೀಡಿದರೆ ಮೊದಲ ಆದ್ಯತೆಯಲ್ಲಿ ದುರಸ್ತಿಗೊಳಿಸಲಾಗುತ್ತಿದೆ. ರಾಜೇಂದ್ರ ಕಟ್ಟಿಮನಿ ಜೆಸ್ಕಾಂ ಎಇಇ ಜೇವರ್ಗಿ ತಾಲ್ಲೂಕು.