ಕಲಬುರ್ಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ವ್ಯಕ್ತಿಗೆ ಇಲ್ಲಿನ ಜೆಎಂಎಫ್.ನಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಶಿಕ್ಷೆಗೆ ಗುರಿಯಾದ ಯಲ್ಲಪ್ಪ ಎಂಬ ವ್ಯಕ್ತಿಯುಬಾಲಕಿಗೆ ಚಾಕೊಲೇಟ್ ಕೊಡಿಸುವ ಆಮಿಷ ನೀಡಿ ಊರ ಹೊರಗಿನ ಮುಲ್ಲಾಮಾರಿ ಕಾಲುವೆ ಬಳಿ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಬಳಿಕ ಏನೂ ನಡೆದಿಲ್ಲ ಎಂಬಂತೆ ಊರೊಳಗೆ ಬಂದು ಪಾನಮತ್ತನಾಗಿ ತಿರುಗುತ್ತಿದ್ದ. ಅಷ್ಟೊತ್ತಿಗಾಗಲೇ ಬಾಲಕಿ ನಾಪತ್ತೆಯಾಗಿದ್ದ ಭೀತಿಯಲ್ಲಿ ಆಕೆಯ ಪೋಷಕರು ಗ್ರಾಮಸ್ಥರೊಂದಿಗೆ ಹುಡುಕಾಟ ನಡೆಸಿದ್ದರು.

ಇದೇ ವೇಳೆ ಯಲ್ಲಪ್ಪ ಬಾಲಕಿಯನ್ನು ತನ್ನೊಟ್ಟಿಗೆ ಕರೆದೊಯ್ಯುತ್ತಿದ್ದುದನ್ನು ಗ್ರಾಮದ ಕೆಲವರು ನೋಡಿದ್ದರು. ಹೀಗಾಗಿ ಆತನ ಮೇಲೆ ಅನುಮಾನ ಮೂಡಿ ಪ್ರಶ್ನಿಸಿದಾಗ ಯಲ್ಲಪ್ಪ ತನ್ನ ತಪ್ಪು ಒಪ್ಪಿಕೊಂಡಿದ್ದ.

ಇಲ್ಲಿ 2ನೇ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಗೋಪಾಲಪ್ಪ ನಿರಂತರ ವಿಚಾರಣೆ ಕೈಗೊಂಡು ಕೇವಲ ಆರು ತಿಂಗಳಲ್ಲಿ ತೀರ್ಪು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.