ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಸೂಗೂರ ಗ್ರಾಮದ ಗುರು ರುದ್ರುಮುನೀಶ್ವರ ಸಂಸ್ಥಾನ ಹಿರೇಮಠದ ಚನ್ನರುದ್ರುಮುನಿ ಶಿವಾಚಾರ್ಯರ ಜನ್ಮ ವರ್ಧಂತಿ, ಕನ್ನಡ ನುಡಿಹಬ್ಬ ಹಾಗೂ ಕಾರ್ತಿಕ ಶಿವದೀಪೋತ್ಸವ ಕಾರ್ಯಕ್ರಮದಲ್ಲಿ ನೇತ್ರ ಉಚಿತ ತಪಾಸಣೆ ಶಿಬಿರವನ್ನು ನ.18ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಮಠದ ಚನ್ನರುದ್ರುಮುನಿ ಶಿವಾಚಾರ್ಯರು, ‘ಕಲಬುರಗಿಯ ಹೆಬ್ಬಾಳ ದೃಷ್ಟಿ ಕೇಂದ್ರದ ನೇತ್ರತಜ್ಞ ಡಾ.ಸಂತೋಷ ಪಾಟೀಲ ಹೆಬ್ಬಾಳ ಅವರು ನೇತ್ರ ತಪಾಸಣೆ ಮಾಡಲಿದ್ದು, ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಹಿರೇಮಠದ ಭಕ್ತ ಶರಣು ಸಾಲಿಮಠ ಮೋಘಾ ಮಾತನಾಡಿ, ‘ಅಂದು ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಮಠಾಧೀಶರು ಮತ್ತು ರಾಜಕೀಯ ಧುರೀಣರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಮಲ್ಲಿನಾಥ ಪಾಟೀಲ ಕಾಳಗಿ, ಶೇಖರ ಪಾಟೀಲ, ವೀರಣ್ಣ ಗಂಗಾಣಿ, ರಾಚೋಟಯ್ಯ ಹಿರೇಮಠ, ನಾಗೇಶ ಹೆಬ್ಬಾಳ, ಅರುಣ ಪಾಟೀಲ, ಅಶೋಕ ರೇಮಣ್ಣಿ, ಶರಣು ಗಾರಂಪಳ್ಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.