ಗುಡ್ಡದ ಸುತ್ತಲೂ ಮನೆಗಳಿವೆ ಭೂ ಕುಸಿತದಿಂದ ಮನೆಗಳ ಮೇಲೆ ಗುಡ್ಡ ಕಡಿದು ಬೀಳುವ ಸಾಧ್ಯತೆ ಇದೆ. ಅನಾಹುತಗಳು ಘಟಿಸುವ ಮುನ್ನ ಎಚ್ಚರಗೊಳ್ಳವುದು ಉತ್ತಮ
ಅಶೋಕ ಸುಗೂರ ವಿಕಾಸ ಅಕಾಡೆಮಿ ಅಧ್ಯಕ್ಷ
ಗುಡ್ಡ ತೆರೆವುಗೊಳಿಸಿದರೆ ತಾಲ್ಲೂಕು ಮಟ್ಟದ ಕಚೇರಿ ಸ್ಥಾಪನೆಗೆ ಜಾಗ ದೊರೆಯುತ್ತದೆ. ಜನ ಸಂದಣಿ ಹೆಚ್ಚಾಗಿ ಕಮಲಾಪುರ ಮೂಲ ಪಟ್ಟಣಕ್ಕೆ ಕಳೆ ಬರುತ್ತದೆ
ಗುರುರಾಜ ಮಾಟೂರ ಕಾಂಗ್ರೆಸ್ ಮುಖಂಡ
- ಗುಡ್ಡ ತೆರವುಗೊಳಿಸಲು ತಜ್ಞರಿಂದ ತಾಂತ್ರಿಕ ಒಪ್ಪಿಗೆ ಪಡೆಯಬೇಕು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಸಾರ್ವಜನಿಕರೊಂದಿಗೆ ಚರ್ಚಿಸಲಾಗುವುದು
ಮೋಸಿನ್ ಅಹಮ್ಮದ ತಹಶೀಲ್ದಾರ್
ಗುಡ್ಡ ಗ್ರಾಮ ಠಾಣಾ ಆಗಿದ್ದು ಪಟ್ಟಣ ಪಂಚಾಯಿತಿಗೆ ಒದಗಿಸುವಂತೆ ತಹಶೀಲ್ದಾರ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣ ಪಂಚಾಯಿತಿ ಕಚೇರಿ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು
ಶಾಂತಪ್ಪ ಹಾದಿಮನಿ ಪ.ಪಂ. ಮುಖ್ಯಾಧಿಕಾರಿ
ಸೆ.17ರಂದು ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಕ್ಕೆ ಗುಡ್ಡ ತೆರವುಗೊಳಿಸುವ ಪ್ರಸ್ತಾವನೆ ಸಲ್ಲಿಸುತ್ತೇನೆ