ಗೋಣಿಕೊಪ್ಪಲು: ಕಾವೇರಿ ತೀರ್ಥ ಅಭಿಷೇಕ ಕುಂದ ಬೆಟ್ಟದ ಮಹದೇವರ ದೇವಸ್ಥಾನದಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಪೊನ್ನಂಪೇಟೆ ಬಳಿಯ ಕುಂದ ಬೆಟ್ಟದ ಮೇಲಿರುವ ಮಹದೇವ ದೇವರಿಗೆ ಕುಂದ ಸುತ್ತಮುತ್ತಲಿನ ಜನತೆ ಭಕ್ತಿಪೂರ್ವವಾಗಿ ನಮಿಸಿ ತೀರ್ಥ ಅಭಿಷೇಕ ಮಾಡಿದರು. ತಲಕಾವೇರಿಯಲ್ಲಿ ತೀರ್ಥೋದ್ಭವವಾದ ಮರು ದಿನ ಕುಂದ ಬೆಟ್ಟದಲ್ಲಿ ಮಹದೇವರಿಗೆ ತೀರ್ಥ ಅಭಿಷೇಕ ಮಾಡುವ ಪದ್ಧತಿ ಹಿಂದಿನಿಂದಲೂ ಬೆಳೆದು ಬಂದಿದೆ. ಈ ಬಾರಿಯೂ ಕೂಡ ಕುಂದ ಗ್ರಾಮದ ಸಣ್ಣುವಂಡ ಮತ್ತು ಮನೆಯಪಂಡ ಕುಟುಂಬಸ್ಥರು ಅಭಿಷೇಕ ಮಾಡಿದರು.

ತೀರ್ಥ ಅಭಿಷೇಕದ ದಿನ ಪ್ರಸಕ್ತ ಸಾಲಿನ ಕೊಡಗಿನ ಮೊದಲ ಬೋಡ್ ನಮ್ಮೆಯನ್ನು ಆಚರಿಸುವ ಪದ್ಧತಿ ಬೆಳೆದುಬಂದಿದೆ. ಮನೆಯಪಂಡ ಮತ್ತು ಸಣ್ಣುವಂಡ ಕುಟುಂಬದ ಐನ್ ಮನೆಯ ಅಂಬಲದಲ್ಲಿ ಕೃತಕ ಕುದುರಗೆ ಪೂಜೆ ನೆರವೇರಿಸಿದರು. ಸಣ್ಣುವಂಡ ಕುಟುಂಬದ ದರ್ಶನ್, ಮನೆಯಪಂಡ ಕುಟುಂಬದ ಕಾವೇರಪ್ಪ ಕೃತಕ ಕುದುರೆ ತಯಾರಿಸಿಕೊಂಡು ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಕುಂದ ದಿಕ್ಕಿನಿಂದ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಬೆಟ್ಟ ಏರಿದರು. ಅವರ ಹಿಂದೆ ನೂರಾರು ಭಕ್ತರು ಕೂಗುತ್ತಾ ಜಯಕಾರ ಹಾಕುತ್ತಾ ಬೆಟ್ಟ ಹತ್ತಿದರು. ಬೆಟ್ಟ ಏರಿದ ಮೇಲೆ ಬೊಟ್ಟ್'ಲಪ್ಪ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು.

ಇದೇ ಸಂದರ್ಭದಲ್ಲಿ ಕೊಡಗಿನ ಮೊದಲ ಬೋಡ್ ನಮ್ಮೆ ಎಂದು ಖ್ಯಾತಿ ಹೊಂದಿರುವ ‘ಕುಂದಾತ್ ಬೊಟ್ಟ್ ಬೋಡ್ ನಮ್ಮೆ’ಗೆ ಚಾಲನೆ ಕೊಟ್ಟರು. ಭಂಡಾರ ತಕ್ಕರಾರ ಸಣ್ಣುವಂಡ ಅಪ್ಪಿ ಪೂಣಚ್ಚ ಪೂಜೆ ಪುನಸ್ಕಾರದ ಉಸ್ತುವಾರಿ ವಹಿಸಿದ್ದರು.

ಎತ್ತರವಾದ ಬೆಟ್ಟದ ಮೇಲೆ ನಿಂತ ನೂರಾರು ಜನರು ಸುತ್ತಲೂ ಕಣ್ಣು ಹಾಯಿಸಿ ಪ್ರಕೃತಿ ಸೌಂದರ್ಯವನ್ನು ನೋಡಿ ಆನಂದಿಸಿದರು. ಬಳಿಕ ಸಂಜೆ ವೇಳೆಗೆ ಎಲ್ಲರೂ ಬೆಟ್ಟದಿಂದ ಇಳಿದು ಮನೆಯತ್ತ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.