ನಾಪೋಕ್ಲು: ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಭಾನುವಾರ ಒಟ್ಟು 17 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು.

ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಭಾನುವಾರದ ಪಂದ್ಯಗಳು ತೀವ್ರ ಹಣಾಹಣಿಯಿಂದ ಕೂಡಿದ್ದವು. ಎರಡು ಪಂದ್ಯಗಳು ಸಮಬಲ ಸಾಧಿಸಿ, ಗೆಲುವಿನ ತೀರ್ಮಾನಕ್ಕೆ ಪೆನಾಲ್ಟಿ ಸ್ಟ್ರೋಕ್ ಮೊರೆ ಹೋಗಬೇಕಾಯಿತು.

ಪೆನಾಲ್ಟಿ ಸ್ಟ್ರೋಕ್ ಅವಕಾಶದಲ್ಲಿ ಅಲ್ಲಾಪಿರ ತಂಡ 3- 1 ಅಂತರದಿಂದ ಬೊಳ್ಳಿಯಂಡ ತಂಡವನ್ನು ಮತ್ತು ಅಚ್ಚಾಂಡಿರ ತಂಡ 3-2ರಿಂದ ಬೊಲ್ಲಾರಪಂಡ ತಂಡವನ್ನು ಮಣಿಸಿದವು.

ಚೊದುಮಂಡ ತಂಡವು ಅನ್ನೇರಕಂಡ ತಂಡದ ವಿರುದ್ಧ 6-0 ಗೋಲುಗಳಿಂದ ಮಣಿಸಿದ್ದು ಪ್ರೇಕ್ಷಕರಿಗೆ ರಸದೌತಣ ನೀಡಿತು. ಗುಮ್ಮಟ್ಟಿರ ತಂಡದಲ್ಲಿ ದೇವಮ್ಮ ಮಹಿಳಾ ಗೋಲ್ಕೀಪರ್ ಆಗಿ ಗಮನ ಸೆಳೆದರು.

ಒಂದು ಗೋಲು ಗಳಿಸಿ ಗೆಲುವು ಸಾಧಿಸಿದ ಪುಲ್ಲಂಗಡ ತಂಡದಲ್ಲಿ ಪತಿ, ಪತ್ನಿ, ಮಗ ಆಡಿದ್ದು ವಿಶೇಷ ಎನಿಸಿತು. ಇಬ್ಬರು ಮಹಿಳೆಯರು ಅಲ್ಲಾಪಿರ ತಂಡದ ಪರವಾಗಿ ಆಡಿದರು.

ಉರಿಯುವ ಬಿಸಿಲ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯಗಳನ್ನು ಕಣ್ತುಂಬಿಗಕೊಂಡರು. ಸುತ್ತಲೂ ಇದ್ದ ವಿವಿಧ ಮಳಿಗೆಗಳಲ್ಲಿಯೂ ಜನಸಂದಣಿ ಅಧಿಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.