ಪ್ರಜಾವಾಣಿ ವಾರ್ತೆ

ಸುಂಟಿಕೊಪ್ಪ: ‘ರಾಜಕೀಯದಲ್ಲಿ ಅಸಕ್ತಿ ಇಲ್ಲ. ಹಾಗಾಗಿ, ನಾನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವುದಿಲ್ಲ. ನಮ್ಮ ಸಂಸ್ಕೃತಿ ಮತ್ತು ಅರಮನೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವೆ’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಇಲ್ಲಿನ ಭಾನುವಾರ ನಡೆದ ಡಿ.ಶಿವಪ್ಪ ಸ್ಮಾರಕ ಗೋಲ್ಡ್‌ಕಪ್ ಪುಟ್‌ಬಾಲ್ ಪಂದ್ಯಾವಳಿಯ ಪೈನಲ್ ಪಂದ್ಯಾವಳಿಗೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕ್ರೀಡೆಯ ಬಗ್ಗೆ ತನಗಿರುವ ಅಭಿಮಾನವನ್ನು ಸುಂಟಿಕೊಪ್ಪದ ಜನತೆ ಸಾಕ್ಷೀಕರಿಸಿರುವುದು, ನನಗೆ ಸಂತೋಷ ತರಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂದ್ಯಾವಳಿಯ ಪ್ರಾಯೋಜಕ ಮತ್ತು ಬೆಟ್ಟಗೇರಿ ತೋಟದ ಮಾಲೀಕ ವಿನೋದ್ ಶಿವಪ್ಪ ಮಾತನಾಡಿ, ‘ನನ್ನ ತಂದೆಯ ನೆನಪಿಗಾಗಿ ನಡೆಸಿಕೊಂಡು ಬರುತ್ತಿರುವ ಈ ಫುಟ್‌ಬಾಲ್ ಟೂರ್ನಿಯು ನಿಮ್ಮ ಸಹಕಾರದಿಂದ ಮುಂದುವರಿಸಲು ನಾನು ಸಿದ್ದ. ಆದರೆ, ಮುಂದಿನ ವರ್ಷದಿಂದ ನನ್ನ ಮಗನಾದ ವಿಶಾಲ್‌ಗೆ ವಹಿಸಿಕೊಡುತ್ತಿದ್ದೇನೆ. ನನಗೆ ನೀಡಿದ ಸಹಕಾರ ಮಗನಿಗೆ ನೀಡಿ’ ಎಂದು ಹೇಳಿದರು.

ವಿಶಾಲ್ ಶಿವಪ್ಪ ಮಾತನಾಡಿ, ‘25 ವರ್ಷಗಳಿಂದ ನಡೆಸಿಕೊಂಡು ಬಂದ ಫುಟ್‌ಬಾಲ್ ಪಂದ್ಯಾವಳಿಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಂಘಟಿಸಲಾಗುವುದು. ಶಾಸಕ ಡಾ.ಮಂತರ್‌ಗೌಡ ಅವರಲ್ಲಿ ಚರ್ಚಿಸಿ ಉತ್ತಮ ಕ್ರೀಡಾಂಗಣ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು.

ಉದ್ಯಮಿ ಹರಪ್ಪಳ್ಳಿ ರವೀಂದ್ರ, ಮುಖಂಡರಾದ ಕೆ.ಎಂ.ಇಬ್ರಾಹಿಂ, ಕೆ.ಪಿ.ಚಂದ್ರಕಲಾ, ಪಿ.ಎಂ.ಲತೀಫ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಿಡಿಒ ವೇಣುಗೋಪಾಲ, ಪನ್ಯ ತೋಟದ ಮಾಲೀಕ ಆನಂದ ಬಸಪ್ಪ, ಕಾಫಿ ಬೆಳೆಗಾರ ವೆಂಕಟರಮಣ, ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಬಿಬಿಸಿ ಅಧ್ಯಕ್ಷ ಆಲಿಕುಟ್ಟಿ, ಟಿ.ವಿ.ಪ್ರಸನ್ನ ಸಂಘದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.