ಮಡಿಕೇರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ‘ನನ್ನ ಮಣ್ಣು ನನ್ನ ಅಭಿಯಾನ’ ಕಾರ್ಯಕ್ರಮ ನಡೆಯಿತು.

ಮಡಿಕೇರಿ, ಸಂಪಾಜೆ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆಗಳಲ್ಲಿ ಆಯಾಯ ಸ್ಥಳೀಯ ಸಂಸ್ಥೆಯಿಂದ ಸಂಗ್ರಹಿಸಿ ತಂದ ಮಣ್ಣನ್ನು ಜಿಲ್ಲಾ ಸಂಸ್ಥೆಯಲ್ಲಿ ಒಟ್ಟು ಸೇರಿಸಿ ಒಂದು ಕಳಸಕ್ಕೆ ತುಂಬಿಸಿ ರಾಜ್ಯ ಸಂಸ್ಥೆಗೆ ಕಳುಹಿಸಿಕೊಡಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ‘ಆಜಾದಿಕ ಅಮೃತ ಮಹೋತ್ಸವದ ಪ್ರಯುಕ್ತ ‘ನಮ್ಮ ಮಣ್ಣು ನಮ್ಮ ದೇಶ’ ಎಂಬ ಧ್ಯೇಯ ವಾಕ್ಯದಂತೆ 6 ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಜಿಲ್ಲಾ ಕಚೇರಿಯ ಮಣ್ಣಿನೊಂದಿಗೆ ಒಟ್ಟು ಸೇರಿಸಿ ನಮ್ಮ ದೇಶದ ಪ್ರೀತಿ ಮತ್ತು ದೇಶ ಪ್ರೇಮದ ಗುರುತಾಗಿ ರಾಜ್ಯ ಸಂಸ್ಥೆಗೆ ಕಳುಹಿಸಿ ಅದನ್ನು ದೇಶದ ಮುಖ್ಯ ಕಚೇರಿಗೆ ಕಳುಹಿಸಲಾಗುವುದು. ಇದು ನಮ್ಮೆಲ್ಲರ ದೇಶ ಪ್ರೇಮದ ಗುರುತು ಮತ್ತು ಜವಾಬ್ದಾರಿ’ ಎಂದರು.

ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವ ಪಲ್ಲದ್ ಮಾತನಾಡಿ, ‘ನಿತ್ಯದ ಜೀವನಕ್ಕೆ ಆರೋಗ್ಯ ಹಾಗೂ ಜೀವನಾಂಶಕ್ಕೆ ಫಲವತ್ತಾದ ಈ ಮಣ್ಣೇ ನಮಗೆ ಆಶ್ರಯ. ಆದ್ದರಿಂದ ಈ ನೆಲವನ್ನು ಪೂಜಿಸಿ ಗೌರವಿಸಬೇಕು ಹಾಗೂ ಸೂಕ್ತ ರೀತಿಯಲ್ಲಿ ಕಾಪಾಡಬೇಕು’ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯ ಪರಿವೀಕ್ಷಕರಾದ ಕೆ.ಆರ್.ಬಿಂದು, ಜಿಲ್ಲಾ ಗೈಡ್ ಕಮೀಷನರ್ ಐಮುಡಿಯಂಡ ರಾಣಿ ಮಾಚಯ್ಯ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ ತರಬೇತಿ ಆಯುಕ್ತ ಮೈಥಿಲಿ ರಾವ್, ಸಹ ತರಬೇತಿ ಆಯುಕ್ತರಾದ ಪಿ.ಎಚ್.ಅಲೀಮಾ, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಕುಶಾಲನಗರ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಸುಲೋಚನಾ, ಮಡಿಕೇರಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಮಾರ್, ಸ್ಕೌಟ್ಸ್ ಮಾಸ್ಟರ್ ಕುಟ್ಟಪ್ಪ, ಗೈಡ್ ಕ್ಯಾಪ್ಟನ್ ಕೆ.ಎನ್.ಗಾಯನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.