ಸಿದ್ದಾಪುರ (ಕೊಡಗು): ಸಮೀಪದ ಗುಹ್ಯ ಗ್ರಾಮದ ನಿವಾಸಿ ಉರಗ ಪ್ರೇಮಿ ಸುರೇಶ್ ಮನೆಯಲ್ಲಿ ಸೋಮವಾರ ಕೊಳಕುಮಂಡಲ ಹಾವು 41 ಮರಿಗಳಿಗೆ ಜನ್ಮ ನೀಡಿದೆ.

ವಾರದ ಹಿಂದೆ ಇಲ್ಲಿನ ಮೈಸೂರು ರಸ್ತೆಯ ಬಡಾವಣೆಯೊಂದರ ಮನೆ ಬಳಿ ಕಲ್ಲುಗಳ ನಡುವೆ ಕೊಳಕುಮಂಡಲ ಹಾವು ಕಂಡು ಬಂದಿತ್ತು. ಸುರೇಶ್ ಅವರು ಜೆಸಿಬಿ ಯಂತ್ರದ ಮೂಲಕ ಹಾವನ್ನು ರಕ್ಷಿಸಿದ್ದರು. ಈ ವೇಳೆ ಹಾವಿಗೆ ಗಾಯವಾಗಿದ್ದರಿಂದ ತಮ್ಮ ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡಿದ್ದರು.

ಚೇತರಿಸಿಕೊಂಡ ಹಾವು ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಹಾಗೂ ಹಾವನ್ನು ತಿತಿಮತಿ ಅರಣ್ಯಕ್ಕೆ ಬಿಟ್ಟಿದ್ದು, ಸುರೇಶ್ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.