ಕೋಲಾರ: ಜಿಲ್ಲಾದ್ಯಂತ ಒಟ್ಟು 15 ಕೇಂದ್ರಗಳಲ್ಲಿ ಶನಿವಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸುಗಮವಾಗಿ ನಡೆದಿದ್ದು, ಬೆಳಿಗ್ಗೆ ಜೀವವಿಜ್ಞಾನ ವಿಷಯಕ್ಕೆ 937 ಮಂದಿ ಹಾಗೂ ಮಧ್ಯಾಹ್ನ ಗಣಿತ ವಿಷಯಕ್ಕೆ 276 ಮಂದಿ ಗೈರಾಗಿದ್ದಾರೆ.

ಜೀವವಿಜ್ಞಾನ ವಿಷಯದ ಪರೀಕ್ಷೆಗೆ ಒಟ್ಟು 6,345 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಅವರಲ್ಲಿ 5,408 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಗಣಿತ ವಿಷಯದ ಪರೀಕ್ಷೆಗೆ ಒಟ್ಟು 6,345 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಅವರಲ್ಲಿ 6,069 ಮಂದಿ ಹಾಜರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.

ಕೋಲಾರದ 13 ಕೇಂದ್ರಗಳು ಹಾಗೂ ಕೆಜಿಎಫ್‍ನ 2 ಕೇಂದ್ರಗಳಲ್ಲಿ ಪರೀಕ್ಷೆಯು ಯಾವುದೇ ಗೊಂದಲಗಳು ಇಲ್ಲದೆ ನಡೆದಿದೆ. ಇಲಾಖೆಯಿಂದ ಪರೀಕ್ಷೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದರು.

ಜೀವ ವಿಜ್ಞಾನ ಪರೀಕ್ಷೆಗೆ ಕೋಲಾರ ನಗರದ ಅಲ್‍ಅಮೀನ್ ಪಿಯು ಕಾಲೇಜಿನಲ್ಲಿ 408 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 39 ಮಂದಿ ಗೈರಾಗಿದ್ದರೆ, ಗೋಕುಲ ಸ್ವತಂತ್ರ ಪಿಯು ಕಾಲೇಜಿನಲ್ಲಿ 480 ಮಂದಿ ಪೈಕಿ 72 ಮಂದಿ ಗೈರಾಗಿದ್ದಾರೆ.

ಮಹಿಳಾ ಸಮಾಜ ಪಿಯು ಕಾಲೇಜಿನ ಕೇಂದ್ರದಲ್ಲಿ 614 ಮಂದಿ ಪೈಕಿ 88 ಮಂದಿ, ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ 552 ಮಂದಿ ಪೈಕಿ 83 ಮಂದಿ, ನೂತನ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 336 ಮಂದಿ ಪೈಕಿ 45 ಮಂದಿ, ಆದರ್ಶ ಪಿಯು ಕಾಲೇಜಿನಲ್ಲಿ 240 ಮಂದಿ ಪೈಕಿ 34 ಮಂದಿ ಗೈರಾಗಿದ್ದರು ಎಂದು ತಿಳಿಸಿದರು.

ಸಹ್ಯಾದ್ರಿ ಪಿಯು ಕಾಲೇಜು ಕೇಂದ್ರದಲ್ಲಿ 528 ಮಂದಿ ಪೈಕಿ 67 ಮಂದಿ, ಎಸ್‍ಡಿಸಿ ಪಿಯು ಕಾಲೇಜಿನಲ್ಲಿ 336 ಮಂದಿ ಪೈಕಿ 38 ಮಂದಿ, ಎನ್.ಎಂ.ಜೆ ಪಿಯು ಕಾಲೇಜಿನಲ್ಲಿ 384 ಮಂದಿ ಪೈಕಿ 47 ಮಂದಿ, ಎಸ್‍ಎಫ್‍ಎಸ್ ಪಿಯು ಕಾಲೇಜಿನಲ್ಲಿ 528 ಮಂದಿ ಪೈಕಿ 72 ಮಂದಿ, ಎಕ್ಸಲೆಂಟ್ ಪಿಯು ಕಾಲೇಜು ಕೇಂದ್ರದಲ್ಲಿ 288 ಮಂದಿ ಪೈಕಿ 31 ಮಂದಿ, ಬಸವಶ್ರೀ ಪಿಯು ಕಾಲೇಜಿನಲ್ಲಿ 312 ಮಂದಿ ಪೈಕಿ 36 ಮಂದಿ ಹಾಗೂ ಕೋಲಾರದ ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ 552 ಮಂದಿ ಪೈಕಿ 59 ಮಂದಿ ಗೈರಾಗಿದ್ದಾರೆ.

ಉಳಿದಂತೆ ಕೆಜಿಎಫ್‍ನಲ್ಲಿ ಎರಡು ಕ್ಷೇತ್ರಗಳಿದ್ದು, ಅಲ್ಲಿನ ಉರಿಗಾಂ ಸರ್ಕಾರಿ ಪಿಯು ಕಾಲೇಜಿನಲ್ಲಿ 547 ಮಂದಿ ಪೈಕಿ ಅತಿ ಹೆಚ್ಚು 152 ಮಂದಿ ಹಾಗೂ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಕೇಂದ್ರದಲ್ಲಿ 240 ಮಂದಿ ಪೈಕಿ 74 ಮಂದಿ ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮೇ 21 ರ ಭಾನುವಾರ ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿವೆ. ಪರೀಕ್ಷೆ ವೇಳೆ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.