ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚುನಾವಣೆ; ಎರಡು ಬಣ ಪೈಪೋಟಿ

Published : 23 ನವೆಂಬರ್ 2024, 5:13 IST
Last Updated : 23 ನವೆಂಬರ್ 2024, 5:13 IST
ಫಾಲೋ ಮಾಡಿ
Comments
ನ.4ರಂದು ಮತದಾನ, ಅಂದೇ ಮತ ಎಣಿಕೆ ಒಟ್ಟು 71 ನಿರ್ದೇಶಕರಿಂದ ಮತದಾನ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್‌ ಸ್ಥಾನಕ್ಕೆ ಮತದಾನ
ಸುರೇಶ್‌ಬಾಬು ವಿರೋಧಿ ಬಣಕ್ಕೆ ರವಿಚಂದ್ರ!
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನ ಚುನಾವಣೆ ಕುತೂಹಲ ಮೂಡಿಸಿದ್ದು ಹಾಲಿ ಅಧ್ಯಕ್ಷ ಸುರೇಶ್‌ಬಾಬು ಅವರ ವಿರೋಧಿ ಬಣಕ್ಕೆ ಮಾಜಿ ಗೌರವ ಅಧ್ಯಕ್ಷ ರವಿಚಂದ್ರ ಜಾರಿದ್ದಾರೆ. ಈವರೆಗೆ ಅವರು ಜೊತೆಯಲ್ಲಿದ್ದವರು ಏಕಾಏಕಿ ಶಾಸಕ ಕೊತ್ತೂರು ಮಂಜುನಾಥ್‌ ಅವರನ್ನು ಭೇಟಿಯಾಗಿದ್ದಾರೆ. ಇದು ಸಂಘದ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ.
ಶಾಸಕರ ಔತಣಕೂಟಕ್ಕೆ 60 ಮಂದಿ ಹಾಜರ್‌!
ನೌಕರರ ಸಂಘದಲ್ಲಿ ಒಟ್ಟು 66 ನಿರ್ದೇಶಕರು ಹಾಗೂ ಐವರು ತಾಲ್ಲೂಕು ಅಧ್ಯಕ್ಷರು ಇದ್ದಾರೆ. ಶಾಸಕರು ಏರ್ಪಡಿಸಿದ್ದ ಔತಣಕೂಟದಲ್ಲಿ 60 ನಿರ್ದೇಶಕರು ಭಾಗವಹಿಸಿದ್ದರು ಎಂಬುದಾಗಿ ಒಂದು ಬಣ ಹೇಳಿಕೊಂಡಿದೆ. ಐವರು ನಿರ್ದೇಶಕರು ವಿವಿಧ ಕಾರಣಗಳಿಂದ ಬಂದಿಲ್ಲ. ಆದರೆ ಬೆಂಬಲದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಉಳಿದ 5 ನಿರ್ದೇಶಕರು ಔತಣಕೂಟದಿಂದ ದೂರ ಉಳಿದಿದ್ದು ಅವರು ಸುರೇಶ್‌ಬಾಬು ಬೆಂಬಲಿಗರು ಎಂಬುದು ಗೊತ್ತಾಗಿದೆ.
ಅಧ್ಯಕ್ಷನ ಸ್ಥಾನದ ಪ್ರಮುಖ ಆಕಾಂಕ್ಷಿಗಳು
ಕಂದಾಯ ಇಲಾಖೆಯ ಅಜಯ್‌ ಕುಮಾರ್‌ ಕೃಷಿ ಇಲಾಖೆಯ ಕೆ.ಎನ್‌.ಮಂಜುನಾಥ್‌ ಕೈಗಾರಿಕಾ ಇಲಾಖೆ ರವಿಚಂದ್ರ ಗ್ರಾಮೀಣ ನೀರು ಸರಬರಾಜು ಇಲಾಖೆಯ ಶ್ರೀನಿವಾಸರೆಡ್ಡಿ ಮಾಲೂರಿನ ಮುನೇಗೌಡ ತೋಟಗಾರಿಕೆ ಇಲಾಖೆಯ ನವೀನ್‌ ಕಮಾರ್‌ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವುದು ಗೊತ್ತಾಗಿದೆ. ಇತ್ತ ಸುರೇಶ್‌ ಬಾಬು ಬಣದಿಂದ ಸುರೇಶ್‌ ಬಾಬು ಅವರೊಬ್ಬರೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT