-ಕೃಷ್ಣಮೂರ್ತಿ

ಕೆಜಿಎಫ್: ಆಲೂಗಡ್ಡೆ, ಟೊಮೆಟೊ ಬೆಳೆದು ಅನಿಶ್ಚಿತ ಬೆಲೆಯ ಆತಂಕ ಎದುರಿಸುತ್ತಿರುವ ರೈತರು, ಲಾಭದಾಯಕ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ.

ತಾಲ್ಲೂಕಿನ ಕುರೂರು ಗ್ರಾಮದ ಪ್ರಗತಿ ಪರ ರೈತ ಗೋಪಿ, ಸಂಪ್ರದಾಯ ಬೆಳೆ ಜತೆಗೆ ಡ್ರಾಗನ್ ಫ್ರೂಟ್ ಬೆಳೆದು ನಿಶ್ಚಿತ ಲಾಭದತ್ತ ದಾಪುಗಾಲು ಹಾಕಿದ್ದಾರೆ.

ಭತ್ತ, ಆಲೂಗಡ್ಡೆ, ಟೊಮೆಟೊ ಮತ್ತು ರೇಷ್ಮೆ ಕೃಷಿ ಬೆಳೆ ಬೆಳೆಯುವ ಗೋಪಿ, ಡ್ರಾಗನ್ ಫ್ರೂಟ್ ಬೆಳೆಯುವತ್ತ ಆಸಕ್ತಿ ಬೆಳೆಸಿಕೊಂಡರು. ಯೂಟ್ಯೂಬ್ನಲ್ಲಿ ಬೆಳೆ ಬಗ್ಗೆ ಮಾಹಿತಿ ಪಡೆದು, ಗುಜರಾತ್ ಮೂಲದ ವ್ಯಕ್ತಿಯಿಂದ ಸಸಿ ತರೆಸಿ ಒಂದೂವರೆ ವರ್ಷದಲ್ಲಿ ಫಸಲು ಪಡೆಯುತ್ತಿದ್ದಾರೆ. ಯಾವುದೇ ತಜ್ಞರಿಂದ ಸಲಹೆ ಪಡೆಯದೇ ಸ್ವಯಂ ಕೃಷಿ ನಡೆಸಿ ಯಶಸ್ಸು ಕಂಡಿದ್ದಾರೆ.

ಎರಡು ಎಕರೆ ಪ್ರದೇಶದಲ್ಲಿ ಡ್ರಾಗನ್ ಫ್ರೂಟ್ ಬೆಳೆದಿದ್ದು, ಈ ಬೆಳೆಯನ್ನು ಒಮ್ಮೆ ನಾಟಿ ಮಾಡಿದರೆ 25 ರಿಂದ 30 ವರ್ಷಗಳ ಕಾಲ ಹಣ್ಣು ಫಸಲು ಪಡೆಯಬಹುದು. ಪ್ರಾರಂಭದಲ್ಲಿ ನಾಲ್ಕೈದು ಲಕ್ಷ ಖರ್ಚಾಗಿದೆ. ಅತಿ ಕಡಿಮೆ ನೀರು ಬೇಡುವ ಸಸಿಗೆ ತಿಪ್ಪೆ ಗೊಬ್ಬರ ಮತ್ತು ಬೇವಿನ ಎಣ್ಣೆ ಇದ್ದರೆ ಗಿಡವನ್ನು ಜೋಪಾನವಾಗಿ ಕಾಪಾಡಿಕೊಳ್ಳಬಹುದು. ಅತಿಯಾದ ಮಳೆ ಮತ್ತು ಅತಿಯಾದ ಬಿಸಿಲು ಇದ್ದಾಗ ಮಾತ್ರ ಬೇವಿನ ಎಣ್ಣೆ ಬಳಕೆ ಮಾಡುತ್ತಿದ್ದೇನೆ. ಬೇರೆ ಬೆಳೆಗಿಂತ ಕಡಿಮೆ ಶ್ರಮದಲ್ಲಿ ಡ್ರಾಗನ್ ಫ್ರೂಟ್ ಬೆಳೆಯಬಹುದು ಎಂಬುದು ಗೋಪಿ ಅವರು ಮಾತಾಗಿದೆ.

ತಾಲ್ಲೂಕಿನಲ್ಲಿ ಅಪರೂಪವಾಗಿ ಕೆಲವರು ಮಾತ್ರ ಈ ಹಣ್ಣನ್ನು ನಾಟಿ ಮಾಡಲು ಶುರು ಮಾಡಿದ್ದಾರೆ. ಘಟ್ಟಮಾದಮಂಗಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗೋಪಿ ಅಭಿವೃದ್ಧಿ ಪಡಿಸಿರುವ ಹಣ್ಣಿನ ತೋಟ ಇತರರನ್ನು ಆಕರ್ಷಿಸತೊಡಗಿದ್ದು, ಸಸಿ ಕೇಳಿಕೊಂಡು ರೈತರು ಬರುತ್ತಿದ್ದಾರೆ.

ಡ್ರಾಗನ್ ಫ್ರೂಟ್ಗೆ ಯಾವಾಗಲೂ ವಿಶೇಷ ಬೇಡಿಕೆ ಇದ್ದು, ಸಾಧಾರಣವಾಗಿ ₹150 ರಿಂದ ₹170 ರವರೆಗೆ ಕೆಜಿ ಬೆಲೆ ಬಾಳುತ್ತದೆ. ಮಾವಿನ ಹಣ್ಣಿನ ಕಾಲದಲ್ಲಿ ಮಾತ್ರ ಬೆಲೆ ಕೊಂಚ ಕಡಿಮೆಯಾಗುತ್ತದೆ. ಕೆ.ಜಿ. ₹50 ಬೆಲೆ ಬಾಳಿದರೂ ಈ ಬೆಳೆ ಲಾಭದಾಯಕ. ವರ್ಷಕ್ಕೆ 9 ಬೆಳೆ ಬೆಳೆಯಬಹುದು. ಎಲೆಯ ಪ್ರತಿ ಮುಳ್ಳಿನಲ್ಲೂ ಸಹ ಹಣ್ಣು ಬರುವುದರಿಂದ ರೈತರಿಗೆ ನಷ್ಟವಾಗುವುದಿಲ್ಲ ಎನ್ನುತ್ತಾರೆ ರೈತ ಗೋಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.