ಐಟಿಐ ಕಾಲೇಜು ಸ್ಥಳಾಂತರ ಅವೈಜ್ಞಾನಿಕ
ನಂಗಲಿ ಮತ್ತು ಎನ್. ವಡ್ಡಹಳ್ಳಿಯು ಮುಳಬಾಗಿಲು ನಗರದ ನಂತರದಲ್ಲಿ ಅತಿಹೆಚ್ಚು ಜನಸಂಖ್ಯೆ ವ್ಯಾಪಾರ ವಹಿವಾಟು ಮತ್ತು ಜನದಟ್ಟಣೆ ಹೊಂದಿದ ಕೇಂದ್ರಗಳಾಗಿವೆ. ಹೀಗಾಗಿ ದೇವರಾಯ ಸಮುದ್ರಕ್ಕೆ ಸ್ಥಳಾಂತರಿಸಲು ಮುಂದಾಗಿರುವ ಐಟಿಐ ಕಾಲೇಜನ್ನು ನಂಗಲಿ ಅಥವಾ ಎನ್.ವಡ್ಡಹಳ್ಳಿಗೆ ಸ್ಥಳಾಂತರಿಸಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಏಕಾಏಕಿ ಈಗಾಗಲೇ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇರುವ ದೇವರಾಯ ಸಮುದ್ರದ ಪಕ್ಕದಲ್ಲೇ ಮತ್ತೊಂದು ಸಂಸ್ಥೆ ಆರಂಭಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಖಲಾತಿ ಕುಸಿಯುವ ಭೀತಿ ದೇವರಾಯ ಸಮುದ್ರಕ್ಕೆ ಮುಳಬಾಗಿಲಿನಲ್ಲಿರುವ ಸಂಸ್ಥೆಯನ್ನು ಸ್ಥಳಾಂತರ ಮಾಡುವುದರಿಂದ ಕೆಜಿಎಫ್ ಬಂಗಾರಪೇಟೆ ಕೋಲಾರ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ವಿದ್ಯಾರ್ಥಿಗಳು ಇನ್ನು ಮುಂದೆ ಕೋಲಾರ ಅಥವಾ ಕೆಜಿಎಫ್ ಸರ್ಕಾರಿ ಸಂಸ್ಥೆಗೆ ದಾಖಲಾತಿ ಪಡೆಯಬಹುದು. ಇದರಿಂದ ಮುಳಬಾಗಿಲು ತಾಲ್ಲೂಕಿನ ಎರಡೂ ಸರ್ಕಾರಿ ಕೈಗಾರಿಕಾ ಸಂಸ್ಥೆಗಳಿಗೆ ದಾಖಲಾತಿ ಕುಸಿಯಬಹುದು ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ.