ಬಂಗಾರಪೇಟೆ: ಹೆರಿಗೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದ ಮಹಿಳೆಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ.

ಪಟ್ಟಣದ ಶಾಂತಿನಗರ ನಿವಾಸಿ ಮಂಜುನಾಥ ಅವರ ಪತ್ನಿ ಭಾರತಿ (28) ಮೃತರು. ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ ಶಸ್ತ್ರಚಿಕಿತ್ಸೆ ಆಗಿದ್ದು, ಹೆಣ್ಣುಮಗುವಾಗಿದೆ. ಮಹಿಳೆಗೆ ರಾತ್ರಿ ತೀವ್ರ ಕಾಲು ನೋವು ಉಂಟಾಗಿದೆ.

ಚಿಕಿತ್ಸೆ ನೀಡಿದ ನಂತರವೂ ನೋವು ಕಡಿಮೆ ಆಗದ ಕಾರಣ ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಮಾರ್ಗಮಧ್ಯದಲ್ಲಿ ಬಾಣಂತಿ ಮೃತಪಟ್ಟಿದ್ದಾರೆ.

‘ಚುಚ್ಚುಮದ್ದು ತರಲು ನರ್ಸ್ ಹೇಳಿದರು. ಚುಚ್ಚುಮದ್ದು ನೀಡಿದರೂ ನೋವು ಕಡಿಮೆಯಾಗಲಿಲ್ಲ. ಆಗ ವೈದ್ಯರು ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು’ ಎಂದು ಮಹಿಳೆ ಪತಿ ಮಂಜುನಾಥ ಹೇಳಿದರು.

ಕುಟುಂಬಸ್ಥರು, ವಿವಿಧ ಸಂಘಟನೆಗಳವರು ಆಸ್ಪತ್ರೆ ಬಳಿ ಪ್ರತಿಭಟಿಸಿದರು.

ಪತ್ನಿಗೆ ಸಕಾಲದಲ್ಲಿ ಚಿಕಿತ್ಸೆ ಕೊಟ್ಟಿಲ್ಲ. ಸ್ಟ್ರೆಚರ್ ತಳ್ಳುವವರಿಗೆ ₹ 300, ವೈದ್ಯರಿಗೆ ₹3 ಸಾವಿರ, ನರ್ಸ್ಗೆ ₹ 500 ಲಂಚ ಕೊಟ್ಟಿರುವೆ. ಆದರೂ ಪತ್ನಿ ಬದುಕಿಲ್ಲ.

– ಮಂಜುನಾಥ, ಮೃತ ಮಹಿಳೆಯ ಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.