ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ನಾಲ್ಕು ಜನ ಉಮೇದುವಾರಿಕೆ ವಾಪಸ್ ಪಡೆದುಕೊಂಡಿದ್ದು ಅಂತಿಮವಾಗಿ ಸ್ಪರ್ಧಾ ಕಣದಲ್ಲಿ 19 ಜನ ಅಭ್ಯರ್ಥಿಗಳು ಉಳಿದಿದ್ದಾರೆ.

ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ತಂದೆ ಕೆ. ಬಸವರಾಜ ಹಿಟ್ನಾಳ, ಕುಷ್ಟಗಿಯ ಮಹಮ್ಮದ್ ನಜೀರುದ್ದೀನ್ ಮೂಲಿಮನಿ, ಕನಕಗಿರಿಯ ಬಸವರಾಜ ಮತ್ತು ಗಂಗಾವತಿಯ ಮಹಮ್ಮದ್ ಸಲ್ಮಾನ್ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಕಣದಲ್ಲಿ ಉಳಿದವರು: ಡಾ. ಬಸವರಾಜ ಕ್ಯಾವಟರ್ (ಬಿಜೆಪಿ), ಕೆ. ರಾಜಶೇಖರ ಹಿಟ್ನಾಳ (ಕಾಂಗ್ರೆಸ್), ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಶಂಕರ (ಬಹುಜನ ಸಮಾಜ ಪಕ್ಷ), ಕೊಪ್ಪಳದ ಅನೋಜಿರಾವ್ ಜಿ., (ಸರ್ವ ಜನತಾ ಪಾರ್ಟಿ), ಬಳ್ಳಾರಿಯ ಡಿ. ದುರ್ಗಾಪ್ರಸಾದ್ ಬ್ಯಾಟರಾಯನಜಿ (ಚಾಲೆಂಜರ್ಸ್ ಪಾರ್ಟಿ), ಸಿಂಧನೂರಿನ ನಿರುಪಾದಿ ಕೆ. ಗೋಮರ್ಸಿ (ಕರ್ನಾಟಕ ರಾಷ್ಟ್ರ ಸಮಿತಿ), ಯಾದಗಿರಿ ತಾಲ್ಲೂಕಿನ ಶಹಾಪುರದ ರಮನಾಜಬಿ (ಆಲ್ ಇಂಡಿಯಾ ಉಲಾಮಾ ಕಾಂಗ್ರೆಸ್), ಶರಣಪ್ಪ ಗಡ್ಡಿ (ಎಸ್‌ಯುಸಿಐ ಸೋಷಲಿಸ್ಟ್), ಸಿ. ಶರಣಬಸಪ್ಪ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ).

ಪಕ್ಷೇತರರಾಗಿ ಕುಷ್ಟಗಿಯ ಇಮಾಮಸಾಬ್ ಜಂಗ್ಲಿಸಾಬ್ ಮುಲ್ಲಾ, ಕೊಪ್ಪಳದ ಕರೀಂಪಾಶ ಗಚ್ಚಿನಮನಿ, ಕುಷ್ಟಗಿ ತಾಲ್ಲೂಕಿನ ಪರಸಾಪುರದ ಕಾಳಪ್ಪ ಎಚ್ಚರಪ್ಪ ವಿಶ್ವಕರ್ಮ ಬಡಿಗೇರ, ಹೊಸಪೇಟೆಯ ಪ.ಯ. ಗಣೇಶ, ಹಗರಿಬೊಮ್ಮನಹಳ್ಳಿಯ ನಾಗರಾಜ್ ಕಲಾಲ್, ಗಂಗಾವತಿ ತಾಲ್ಲೂಕು ವಡ್ಡರಹಟ್ಟಿಯ ಕರಡಿ ಬಸವರಾಜ, ಕೊಪ್ಪಳದ ಮಲ್ಲಿಕಾರ್ಜುನ ಹಡಪದ, ಬಳ್ಳಾರಿಯ ರುಕ್ಮಿಣಿ, ರಾಯಚೂರು ಜಿಲ್ಲೆ ಮಾನ್ವಿಯ ಸುರೇಶಗೌಡ ಮುಂದಿನಮನಿ ಮತ್ತು ಕುಷ್ಟಗಿ ತಾಲ್ಲೂಕಿನ ಶಾಖಾಪುರದ ಹನಮೇಶ ಎಸ್.ಎಚ್. ಕಣದಲ್ಲಿ ಉಳಿದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.