ಗಂಗಾವತಿ: ‘ಕೋವಿಡ್ ವೇಳೆಯಲ್ಲಿ ಜೀವದ ಹಂಗು ತೊರೆದು, ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತರಿಗೆ ಈವರೆಗೆ ಗೌರವಧನ ಸೇರಿದಂತೆ ಕೋವಿಡ್ ಭತ್ಯೆ ವಿತರಣೆ ಮಾಡಿಲ್ಲ‘ ಎಂದು ಆಶಾ ಕಾರ್ಯಕರ್ತರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹೇಳಿದರು.

ನಗರದ ಕೃಷ್ಣದೇವರಾಯ ಕಲಾ ಭವನದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಆಶಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ತಡೆಗಟ್ಟುವ ಪ್ರಕ್ರಿಯೆಯಲ್ಲಿ ಅಶಾ ಕಾರ್ಯಕರ್ತರು ಕೋವಿಡ್ ಸಮೀಕ್ಷೆ ಜೊತೆಗೆ ಹೆರಿಗೆ, ತಾಯಿ-ಶಿಶು ಆರೈಕೆ, ಗ್ರಾಮ ನೈರ್ಮಲ್ಯ, ಕಾರ್ಯಕರ್ತರ ಕೆಲಸವಲ್ಲದಿದ್ದರೂ,ಎನ್‌ಸಿಡಿ ಸಮೀಕ್ಷೆ, ಈ-ಸಂಜೀವಿನಿ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ.

ಕೋವಿಡ್ ಸೇರಿದಂತೆ ವಿವಿಧ ಪರೀಕ್ಷೆ, ಕೋವಿಡ್ ಲಸಿಕೆ ಜಾಗೃತಿ, ಲಸಿಕೆ ತರುವ ಕೆಲಸಗಳನ್ನು ಮಾಡಿಸಲಾಗುತ್ತಿದ್ದು, ಕಾರ್ಯರ್ತೆಯರು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಇವರೆಗೆ ₹ 1ಸಾವಿರ ಕೋವಿಡ್ ಭತ್ಯೆಯೇ ನೀಡಿಲ್ಲ.

ಆಶಾನಿಧಿ ಪೋರ್ಟಲ್‌ನಲ್ಲಿ ಕಾರ್ಯಕರ್ತೆಯರು ಮಾಡಿದ ಕಾರ್ಯಗಳ ಮಾಹಿತಿ ನಮೂದು ಆಗದರೆ ಇರುವುದರಿಂದ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸಿದ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಜೊತೆಗೆ ಡಿಬಿಟಿ ಮಾಸಿಕ ಗೌರವಧನವು ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೆ ಸರ್ಕಾರ ಆಶಾ ಕಾರ್ಯಕರ್ತೆಯರಿಂದ ಈ-ಸಂಜೀವಿನಿ, ಎನ್‌ಸಿಡಿ ಸಮೀಕ್ಷೆ ಮಾಡಿಸುವುದನ್ನು ಕೈಬಿಟ್ಟು, ಏಪ್ರಿಲ್ 2020 ರಿಂದ ಸೆಪ್ಟೆಂಬರ್ 2021ರವರೆಗೆ ಬಾಕಿ ಇರುವ ಕೋವಿಡ್ ಪ್ರೋತ್ಸಾಹಧನ ವಿತರಣೆ ಮಾಡಬೇಕು.

ಇಲಾಖೆಯ ಮಾರ್ಗಸೂಚಿ ಪ್ರಕಾರ ಖಾಲಿ ಇರುವ ಫೆಸಲಿಟೆಟರ್ ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಫೇಸ್ ಶೀಲ್ಡ್ ಗಳನ್ನು ಒದಗಿಸಿಕೊಡಬೇಕು.

ಹಾಗೇಯೆ ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದು ಕೊರತೆ ನಿವಾರಣಾ ಸಭೆ ಆಯೋಜಿಸಿ, ಮೂಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಎಐಯುಟಿಯುಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ತಾಲ್ಲೂಕು ಅಧ್ಯಕ್ಷ ಶಾರದಾ ಕಟ್ಟಿಮನಿ, ನಗರ ಅಧ್ಯಕ್ಷ ವಿಜಯಲಕ್ಷ್ಮಿ, ಲಾಲ್ ಬಿ, ಜ್ಯೋತಿ ಲಕ್ಷ್ಮಿ, ಮಂಜುಳಾ, ಪುಷ್ಪವತಿ, ರಾಜೇಶ್ವರಿ, ಯಲ್ಲಮ್ಮ, ಸುಕನ್ಯ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.