ಕೊಪ್ಪಳ: ವಿದ್ಯುತ್ ದೀಪಗಳ ಅಲಂಕಾರ, ತರಹೇವಾರಿ ಹೂಗಳಿಂದ ಶೃಂಗಾರಗೊಂಡ ಇಲ್ಲಿನ ಗವಿಮಠದ ಕೆರೆಯ ಆವರಣದಲ್ಲಿ ಬುಧವಾರ ರಾತ್ರಿ ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು.

ಕೆರೆಯ ಅಂಚಿನಲ್ಲಿರುವ ಕಿರು ವೇದಿಕೆಯಲ್ಲಿ ಸೂಸುತ್ತಿದ್ದ ತಂಪಾದ ಗಾಳಿಯ ನಡುವೆ ಧಾರವಾಡದ ಅಯ್ಯಪ್ಪಯ್ಯ ಹಲಗಲಿಮಠ ಹಾಗೂ ತಂಡದಿಂದ ಹೊರಹೊಮ್ಮಿದ ಸಂಗೀತ ಭಕ್ತರ ಕಿವಿಗೆ ಇಂಪು ನೀಡಿದರೆ, ತೆಪ್ಪೋತ್ಸವದ ಅಲಂಕಾರ ಕಣ್ಮನ ಸೆಳೆಯಿತು.

ಕೆರೆಯ ಸುತ್ತಲೂ ತೆಪ್ಪ ಸುತ್ತುತ್ತಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆ ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಇನ್ನೂ ಹಲವರು ಗವಿಸಿದ್ಧೇಶ್ವರರ ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು. ಕೆರೆಯ ಸುತ್ತಲೂ ಹಾಕಿದ್ದ ಬಣಬಣ್ಣದ ವಿದ್ಯುತ್ ದೀಪಗಳ ಹೊಳಪಿನ ಪ್ರತಿಬಿಂಬ ಕೆರೆಯಲ್ಲಿ ಬಿದ್ದಾಗಲಂತೂ ಅದನ್ನು ನೋಡುವ ಕ್ಷಣವೇ ಅದ್ಭುತ ಎನ್ನುವಂಥ ಭಾವ ಜನರಲ್ಲಿ ಕಣ್ಣು ಬಂದಿತು.

ನಿಸರ್ಗದ ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊಂಡ ತೆಪ್ಪ ದೈವದ ತೊಟ್ಟಿಲಿನಂತೆ ತೇಲುತ್ತ ಗವಿಸಿದ್ಧೇಶ್ವರನ ಮೂರ್ತಿಯನ್ನು ತನ್ನ ಮಡಿಲಲ್ಲಿಕೊಂಡು ತೂಗುತ್ತ ಭಕ್ತರ ಹೃನ್ಮನ ತಣಿಸಿತು.

ಪುಟ್ಟರಾಜ ಗವಾಯಿಗಳು ವಿರಚಿತ ಮಹಾದೇವಿ ಪುರಾಣ ಕೃತಿಯನ್ನು ವಿರಕ್ತಮಠ ಬಿಜಕಲ್‍ನ ಶಿವಲಿಂಗ ಸ್ವಾಮೀಜಿ ಬಿಡುಗಡೆಮಾಡಿದರು. ಮುನಿರಾಬಾದ್ ಡಯಟ್‍ನ ನಿವೃತ್ತ ಪ್ರಾಧ್ಯಾಪಕ ಪಂಚಾಕ್ಷರಯ್ಯ ನೂರಂದಯ್ಯನಮಠ ಚಾಲನೆ ನೀಡಿದರು. ಮಠದ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಗವಿಸಿದ್ಧಗೆ ನಮೋ ನಮೋ, ಗವಿಮಠಾಧೀಶಗೆ ನಮೋ ನಮೋ ಮಂಗಳ ಗೀತೆ ಮೊಳಗಿದವು. ಅರ್ಚಕರಿಂದ ಗವಿಸಿದ್ದೇಶ್ವರನಿಗೆ ಗಂಗಾ ಆರತಿ ಬೆಳಗಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.