ಗಂಗಾವತಿ: ‘ನರೇಂದ್ರ ಮೋದಿಯೇ ಮತ್ತೆ ಪ್ರಧಾನಿ ಆಗಬೇಕು ಎಂಬುದು ದೇಶದ ಜನರ ಆಶಯ. ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಲು ಬಿಜೆಪಿ ನಾಯಕರು ಸೂಚಿಸಿದರೆ ಖಂಡಿತವಾಗಿ ಮೋದಿ ಗೆಲುವಿಗೆ ನನ್ನ ಶ್ರಮವಿರುತ್ತದೆ’ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು.

‘ಪಕ್ಷಕ್ಕೆ ಮರಳಿ ಬರಲು ಬಿಜೆಪಿ ಕೇಂದ್ರ ನಾಯಕರಿಂದ ಆಹ್ವಾನ ಬಂದಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ‘ಸದ್ಯ ಬಿಜೆಪಿಗೆ ಹೋಗುವುದಿಲ್ಲ. ಕೆಆರ್ಪಿಪಿಯನ್ನು ಸದೃಢವಾಗಿ ಬೆಳೆಸುವ ಕಾರ್ಯದಲ್ಲಿ ನಿರತನಾಗಿದ್ದೇನೆ’ ಎಂದರು.

‘ಬಿಜೆಪಿಯ ಕೇಂದ್ರ ನಾಯಕರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿಯಿದೆ. ನನ್ನನ್ನು ಯಾವ ನಾಯಕರೂ ದೂರ ಮಾಡಿಲ್ಲ. 28 ಕ್ಷೇತ್ರಗಳಿಗೆ ಕೆಆರ್ಪಿಪಿ ಅಭ್ಯರ್ಥಿಗಳನ್ನು ನಿಲ್ಲಿಸಿ, ಗೆಲ್ಲಿಸಿಕೊಳ್ಳುವ ಶಕ್ತಿ, ಸಮಯ ಎರಡೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರಲ್ಲ. ಚುನಾವಣೆಯಲ್ಲಿ ಸಹಕಾರವನ್ನೂ ನೀಡಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.