ಹನುಮಸಾಗರ: ಈಚೆಗೆ ನಿರ್ಮಿಸಲಾಗಿದ್ದ ಹನುಮಸಾಗರ-ಹನುಮನಾಳ ರಸ್ತೆಯನ್ನು ಅಲ್ಲಲ್ಲಿ ಕಡಿದು ಹಾಳು ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

‘ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅಕ್ಕಪಕ್ಕದ ರೈತರು ಹಾಗೂ ಇಟ್ಟಿಗೆ ಭಟ್ಟಿಗಳವರಿಗೆ ಅವಶ್ಯ ಇದ್ದವರು ಈಗಲೇ ಪೈಪ್ಲೈನ್ ಮಾಡಿಕೊಳ್ಳಿ ಎಂದು ಗುತ್ತಿಗೆದಾರರು ತಿಳಿಸಿದ್ದರು. ಆದರೆ ರಸ್ತೆ ನಿರ್ಮಾಣವಾಗುವವರೆಗೆ ಸುಮ್ಮನೆ ಕುಳಿತು ರಸ್ತೆ ಸಿದ್ಧವಾದ ಕೆಲ ದಿನಗಳಲ್ಲಿಯೇ ಹೀಗೆ ಕಡಿದು ಹಾಕಿರುವುದು ಸರಿಯಲ್ಲ’ ಎಂದು ಜಹಗೀರಗುಡದೂರ ಗ್ರಾಮದ ಬಸವರಾಜ ಬೆನಕನಾಳ ಹಾಗೂ ಗುರಪ್ಪ ಕಾಟಾಪೂರ ಹೇಳಿದರು.

15 ಕಿ.ಮೀ ಉದ್ದದ ಹನುಮಸಾಗರ–ಹನುಮನಾಳ ರಸ್ತೆಯ ಒಂಭತ್ತು ಕಡೆ ಕಡಿದು ಹಾಳು ಮಾಡಲಾಗಿದೆ.

ರಸ್ತೆಯನ್ನು ಕಡಿಯುವಾಗ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳುವುದು ಕಡ್ಡಾಯವಾಗಿದ್ದರೂ ಯಾರನ್ನೂ ಕೇಳದ, ಯಾವ ಅನುಮತಿಯನ್ನೂ ಪಡೆದುಕೊಂಡಿಲ್ಲ.

ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂಥ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ವಾಹನ ಚಾಲಕರು ನೋವಿನಿಂದ ಹೇಳಿದರು.

ಮನಬಂದಂತೆ ರಸ್ತೆ ಕಡದಿರುವುದರಿಂದ ರಾತ್ರಿ ಸಮಯದಲ್ಲಿ ವಾಹನ ಚಾಲಕರಿಗೆ ಕಿರಿ ಕಿರಿಯಾಗುತ್ತಿದ್ದು ಕೂಡಲೇ ದುರಸ್ತಿ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.