ಕಾರಟಗಿ: ಪಟ್ಟಣದ ಪುರಸಭೆಯ 21ನೇ ವಾರ್ಡ್ನ 1 ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನ.23ರಂದು ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರವಾಗಿ ಗುರುವಾರ ಮನೆ, ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.

ಸದಸ್ಯರಾಗಿದ್ದ ರಾಮಣ್ಣ ಭಜಂತ್ರಿ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಕಾಂಗ್ರೆಸ್ನಿಂದ ಸುರೇಶ ಭಜಂತ್ರಿ ಮತ್ತು ಬಿಜೆಪಿಯಿಂದ ಬಿ.ಎಂ.ಯಲ್ಲಪ್ಪ ಸ್ಫರ್ಧಿಸಿದ್ದಾರೆ. ಒಟ್ಟು ಮತದಾರರ ಸಂಖ್ಯೆ 947 ಇದ್ದು, ಪುರುಷರು 490 ಹಾಗೂ ಮಹಿಳೆಯರು 487 ಇದ್ದಾರೆ.

ಉಪಚುನಾವಣೆಯಲ್ಲಿ ಮತ್ತೇ ತಮ್ಮ ಸದಸ್ಯ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಪುರಸಭೆಯಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಮುಖಂಡರು, ಕಾರ್ಯಕರ್ತರು ಅಭ್ಯರ್ಥಿಗಳೊಂದಿಗೆ ಮನೆ, ಮನೆಗಳಿಗೆ ತೆರಳಿ ಮತಯಾಚನೆ ಮಾಡುವುದು ಬಿರುಸಿನಿಂದ ನಡೆಯಿತು.

ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಮೌನೇಶ ದಢೇಸೂಗೂರು, ರಮೇಶ ನಾಡಿಗೇರ, ಮಂಜುನಾಥ್ ಮಸ್ಕಿ ಪುರಸಭೆ ಸದಸ್ಯರಾದ ಸೋಮನಾಥ ಬೇರ್ಗಿ, ಬಸವರಾಜ್ ಕೊಪ್ಪದ, ಧನಂಜಯ, ಪಕೀರಪ್ಪ ನಾಯಕ, ರಾಮಣ್ಣ ಹೊಸಕ್ಯಾಂಪ, ಆನಂದ ಕೆಂಗೇರಿ ಗಂಗಾವತಿ ನಗರಸಭೆ ಅಧ್ಯಕ್ಷ ಮೌಲಾಸಾಬ್, ಪ್ರಮುಖರಾದ ಶರಣಪ್ಪ ದೇವರಮನಿ, ಬಸವರಾಜ್ ಶಿವಶಕ್ತಿ, ಅಮರೇಶ ನಾಯಕ, ಹನುಮಂತ ಹಗೇದಾಳ, ರಾಘವೇಂದ್ರ ಭೋವಿ, ಸಂತೋಷ, ಗಣೇಶ, ರಾಘು, ಮಂಜುನಾಥ ನಾಯಕ, ಸಮೀರ್, ಮುತ್ತುರಾಜ್, ದೊಡ್ಡಬಸವ, ಹುಲಗಪ್ಪ ದಿಡ್ಡಿಮನಿ, ಬಸವರಾಜ ಅಂಗಡಿ, ರಮೇಶ ಸಾಲೋಣಿಯವರು ಅಭ್ಯರ್ಥಿ ಯಲ್ಲಪ್ಪ ಅವರೊಂದಿಗೆ ವಾರ್ಡ್ಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡ ವೆಂಕಟೇಶ್ ತಂಗಡಗಿ ನೇತೃತ್ವದಲ್ಲಿ ಗುರುವಾರ ಪ್ರಚಾರ ನಡೆಸಲಾಯಿತು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಪುರಸಭೆ ಸದಸ್ಯರು ಅಭ್ಯರ್ಥಿ ಸುರೇಶ ಪರವಾಗಿ ವಾರ್ಡ್ನ ಪ್ರತಿ ಮನೆಗಳಿಗೆ ತೆರಳಿ, ಕರಪತ್ರ, ಮಾದರಿ ಮತಪತ್ರ ವಿತರಿಸಿ ಮತಯಾಚನೆ ಮಾಡಿದರು.

ಮುಖಂಡ ವೆಂಕಟೇಶ ತಂಗಡಗಿ ಮಾತನಾಡಿ, ‘ನಮ್ಮ ಸಹೋದರ ಸಚಿವ ಶಿವರಾಜ್ ತಂಗಡಗಿ ಕೈಬಲಪಡಿಸಲು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರಿ’ ಎಂದು ಮನವಿ ಮಾಡಿದರು.

ಪುರಸಭೆ ಸದಸ್ಯರಾದ ಎಚ್.ಈಶಪ್ಪ, ಸಂಗನಗೌಡ, ದೊಡ್ಡಬಸವ ಬೂದಿ, ಮೇಗೂರು ಮಂಜುನಾಥ, ಸಿದ್ದಪ್ಪ ಬೇವಿನಾಳ, ವೀರೇಶ ಮುದುಗಲ್, ಮುಖಂಡರಾದ ಕೆ. ಸಿದ್ದನಗೌಡ, ಚನ್ನಬಸಪ್ಪ ಸುಂಕದ , ಗಿರಿಯಪ್ಪ ಬೂದಿ, ಶರಣಯ್ಯಸ್ವಾಮಿ ಬೇವಿನಾಳ, ನಾಗರಾಜ್ ಅರಳಿ, ರಾಜಶೇಖರ ಆನೆಹೊಸೂರು, ಬಸವರಾಜ್ ಬೂದಿ, ಖಾಜಾ ಹುಸೇನ್ ಮುಲ್ಲಾ, ಸಿದ್ದಪ್ಪ ಬೇವಿನಾಳ, ಶಬ್ಬೀರ್, ಉದಯ್ ಈಡಿಗೇರ, ಮೂರ್ತೆಪ್ಪ ಉಪ್ಪಾರ, ನಾಗರಾಜ್ ಭಜಂತ್ರಿ, ಬಸವರಾಜ್ ವಕೀಲ, ವೀರೇಶ್ ಯತ್ನಟ್ಟಿ, ಅಮರೇಶ್ ಬಿಜಕಲ್, ಅಮೃಲ್, ಅಮ್ಜದ್, ಶಿರಾಜ್ ಹುಸೇನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.