ಕೊಪ್ಪಳ: ‘ಮರಕ್ಕೆ ಬೇರಿನಷ್ಟೇ ಮನುಷ್ಯನಿಗೆ ನಂಬಿಕೆ ಮುಖ್ಯ. ನನ್ನ ಹಾಗೂ ಭಗವಂತನ ನಡುವೆ ನೇರ ಸಂಬಂಧವಿರುತ್ತದೆ. ಗವಿಸಿದ್ಧೇಶ್ವರನ ಸನ್ನಿಧಿಯಲ್ಲಿ ನಾನೇನು ಸಂಕಲ್ಪ ಮಾಡಿಕೊಂಡಿದ್ದೇನೆ ಎನ್ನುವುದು ನನಗೆ ಹಾಗೂ ದೇವರಿಗೆ ಮಾತ್ರ ಗೊತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಶನಿವಾರ ಇಲ್ಲಿ ಗವಿಮಠದ ಜಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಇಲ್ಲಿ ಸುಖ, ನೆಮ್ಮದಿ ಹಾಗೂ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇದೊಂದು ಶಕ್ತಿಕೇಂದ್ರವಾಗಿದ್ದು, ಜನರಿಗೆ ಜ್ಞಾನ ಮತ್ತು ಧರ್ಮದ ಅರಿವು ಮೂಡಿಸುವ ಸ್ಥಳ ಇದಾಗಿದೆ. ನಾನು ರಾಜಕಾರಣಿಯಾಗಿ ಬಂದಿಲ್ಲ. ಒಬ್ಬ ಭಕ್ತನಾಗಿ ಬಂದಿದ್ದೇನೆ’ ಎಂದರು.

ಇದಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿ ಇರುತ್ತಾರೆಯೇ ಎನ್ನುವ ಪ್ರಶ್ನೆಗೆ ‘ಇದೀಗ ಇದ್ದಾರಲ್ಲ. ಅದರ ಬಗ್ಗೆ ನಿಮಗೆ ಯಾಕೆ ಚಿಂತೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.