ಹನುಮಸಾಗರ: ‘ಜನರಲ್ಲಿ ಕನ್ನಡ ಭಾಷೆ, ನೆಲ, ಜಲದ ಕುರಿತು ಅಭಿಮಾನ ಮೂಡಿಸುವಂಥ ಕೆಲಸಗಳನ್ನು ಮಾಡಬೇಕಾದ ಅಗತ್ಯ ಇದೆ. ಇದಕ್ಕಾಗಿ ಎಲ್ಲ ಕನ್ನಡ ಮನಸ್ಸುಗಳನ್ನು ಸಂಘಟಿಸುವ ಕೆಲಸ ಆಗಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಸಮಿತಿ ಗೌರವ ಸಲಹೆಗಾರ ಮಲ್ಲಯ್ಯ ಕೋಮಾರಿ ಸಲಹೆ ನೀಡಿದರು.

ಇಲ್ಲಿನ ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಗ್ರಂಥಾಲಯದ ಅವಶ್ಯಕತೆ ಇದೆ. ಕನ್ನಡ ಭವನದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಷಿ ಅವರೊಂದಿಗೆ ಮಾತನಾಡಿ ಪುಸ್ತಕ ಖರೀದಿಗೆ ಅನುದಾನ ಹಾಗೂ ಪುಸ್ತಕ ನೆರವು ನೀಡಬೇಕು ಎಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಸಮಿತಿ ನೂತನ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ ಮಾತನಾಡಿ,‘ಕಸಾಪ ವತಿಯಿಂದ ಕಾರ್ಯಕ್ರಮಗಳನ್ನು ಹಾಕಿಕೊಂಡು ಅದನ್ನು ಜನ ಸಾಮಾನ್ಯರ ಬಳಿ ತೆಗೆದುಕೊಂಡು ಹೋಗುವ ಕೆಲಸ ಮಾಡಲು ಯೋಜಿಸ ಲಾಗಿದೆ. ಸದಸ್ಯರ ನೋಂದಣಿ ಹಾಗೂ ದತ್ತಿದಾನಿಗಳನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ’ ಎಂದರು.

ಪದಾಧಿಕಾರಿಗಳ ವಿವರ: ಇದೇ ಸಂದರ್ಭದಲ್ಲಿ ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮಂಜುನಾಥ ಗುಳೇದಗುಡ್ಡ (ಅಧ್ಯಕ್ಷ), ಬಸವರಾಜ ದಟ್ಟಿ ಹಾಗೂ ಮಂಜುನಾಥ ಹನುಮಸಾಗರ (ಗೌರವ ಕಾರ್ಯದರ್ಶಿ), ಆಸೀಫ್ ಡಲಾಯಿತ್ (ಕೋಶಾಧ್ಯಕ್ಷ), ರೇಣುಕಾ ಪುರದ (ಮಹಿಳಾ ಪ್ರತಿನಿಧಿ), ಮಹಾಂತೇಶ ಗವಾರಿ, ಗ್ಯಾನಪ್ಪ ತಳವಾರ, ವಿಜೇಂದ್ರ ಕುಲಕರ್ಣಿ, ಸಂಗಮೇಶ ಬ್ಯಾಳಿ, ಶ್ಯಾಮೀದಸಾಬ ವಾಲಿಕಾರ, ಬಸವರಾಜ ಚೌಡಾಪೂರ, ಬಾಳಪ್ಪ ಪತ್ತಾರ, ಬಸಮ್ಮ ಹಿರೇಮಠ, ಸುನೀತಾ ಕೋಮಾರಿ ಸೇರಿದಂತೆ 17 ಜನ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಕಸಾಪ ತಾಲ್ಲೂಕು ಸಮಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ ಹಾಗೂ ಚಂದಪ್ಪ ಹಕ್ಕಿ, ಮಹಾಂತೇಶ ಚೌಡಾಪೂರ, ಅಬ್ದುಲ್ ಕರೀಮ್ ವಂಟೆಳಿ, ಅಬ್ದುಲ್ ರಜಾಕ್ ಟೇಲರ್, ಮಲ್ಲಪ್ಪ ಲಂಗಟದ, ವೀರೇಶ ವಿಶ್ವಕರ್ಮ ಹಾಗೂ ಅಡಿವೆಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.