ಕೊಪ್ಪಳ: ಕುಡಿಯಲು ಹಾಗೂ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಒದಗಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಮಿತಿಯ ಅಧ್ಯಕ್ಷರೂ ಆದ ಸಚಿವ ಶಿವರಾಜ ತಂಗಡಗಿ ‘ಎರಡನೇ ಬೆಳೆಗೆ ಮಾರ್ಚ್ ಅಂತ್ಯದವರೆಗೆ ನೀರು ಒದಗಿಸಲಾಗುತ್ತದೆ. 19ನೇ ಕ್ರಸ್ಟ್ ಗೇಟ್ ಮುರಿದು ಹೋಗಿ ಎರಡನೇ ಬರಿ ಜಲಾಶಯ ಭರ್ತಿಯಾಗಿದ್ದು ಇತಿಹಾಸ. ಕ್ರಸ್ಟ್ ಗೇಟ್ ಮುರಿದು ಹೋಗಿದ್ದರೂ ಮತ್ತೆ ಜಲಾಶಯ ತುಂಬಿದೆ’ ಎಂದು ಹೇಳಿದರು.

ನೀರು ಹರಿವಿನ ವಿವರ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ. 1ರಿಂದ 15ರ ವರೆಗೆ 1500 ಕ್ಯುಸೆಕ್, 16ರಿಂದ 31ರ ವರೆಗೆ 2000 ಕ್ಯುಸೆಕ್ನಂತೆ, ಜ.1ರಿಂದ ಮಾ. 31ರ ವರೆಗೆ 3800 ಕ್ಯುಸೆಕ್ನಂತೆ ನೀರು ಹರಿಯಲಿದೆ. ಕುಡಿಯುವ ನೀರಿಗಾಗಿ ಏ. 1ರಿಂದ 10ರ ವರೆಗೆ ನಿತ್ಯ 1650 ಕ್ಯುಸೆಕ್.

ಎಡದಂಡೆ ವಿಜಯನಗರ ಕಾಲುವೆಗೆ ಏ. 11ರಿಂದ ಮೇ 10ರ ತನಕ 150 ಕ್ಯುಸೆಕ್ನಂತೆ ವಿತರಣಾ ಕಾಲುವೆ ಒಂದರಿಂದ 11 ಎ ವರೆಗೆ ಅಥವಾ ಈ ಕಾಲುವೆಗೆ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದರ ಪ್ರಕಾರ, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ 10ರ ವರೆಗೆ ನೀರು ನಿಲುಗಡೆ, 11ರಿಂದ 31ರ ವರೆಗೆ 800 ಕ್ಯುಸೆಕ್ನಂತೆ, ಜ.1ರಿಂದ 10ರ ವರೆಗೆ ನೀರು ನಿಲುಗಡೆ, 11ರಿಂದ 31ರ ವರೆಗೆ ನಿತ್ಯ 800 ಕ್ಯುಸೆಕ್ನಂತೆ ನೀರು ಹರಿಸಲಾಗುತ್ತದೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 1ರಿಂದ 15ರ ವರೆಗೆ 400 ಕ್ಯುಸೆಕ್ನಂತೆ, 16ರಿಂದ 31ರ ವರೆಗೆ 600 ಕ್ಯುಸೆಕ್ನಂತೆ, ಜ. 1ರಿಂದ ಫೆ. 28ರ ವರೆಗೆ 650 ಕ್ಯುಸೆಕ್ನಂತೆ ಹಾಗೂ ಮಾರ್ಚ್ 1ರಿಂದ 31ರ ವರೆಗೆ, ರಾಯಬಸವಣ್ಣ ಕಾಲುವೆಗೆ ಡಿ. 10ರಿಂದ ಜ. 10ರ ವರೆಗೆ ನೀರು ನಿಲುಗಡೆ ಮತ್ತು 11ರಿಂದ ಮೇ 31ರ ವರೆಗೆ 250 ಕ್ಯೂಸೆಕ್ನಂತೆ ಅಥವಾ ನೀರಿನ ಲಭ್ಯತೆ ಇದರಲ್ಲಿ ಯಾವುದು ಮೊದಲೊ ಅಲ್ಲಿಯ ತನಕ ನೀರು ಬಿಡಲಾಗುತ್ತದೆ. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ ನಿತ್ಯ 25 ಕ್ಯುಸೆಕ್ನಂತೆ ನೀರು ಹರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.