ಮಂಡ್ಯ: ಜಿಲ್ಲೆಯಲ್ಲಿ ಪಟಾಕಿ ಹಚ್ಚುವುದು ಬೇಡ ಎಂಬ ‘ಪಟಾಕಿ ಬಿಟ್ಟಾಕಿ’ ಜಾಗೃತಿ ನಡುವೆಯೂ ವಿಜೃಂಭಣೆಯಿಂದ ದೀಪಾವಳಿ ಆಚರಿಸಲು ಪಟಾಕಿ ಖರೀದಿ ಜೋರಾಗಿದೆ.ಸಾಂಪ್ರದಾಯಿಕ ಹಬ್ಬ ಆಚರಣೆಗೆ ಜನರು ಆಣಿಯಾಗುತ್ತಿದ್ದುದು ಕಂಡುಬಂತು.

ಗುರುವಾರ ನರಕ ಚತುರ್ದಶಿ ಮತ್ತು ಶುಕ್ರವಾರ ಜನರು ಲಕ್ಷ್ಮೀಪೂಜೆ ಮಾಡಿದರು. ಅಮಾವಸ್ಯೆಯಂದು ಬೆಳಿಗ್ಗಿನಿಂದಲೇ ದೇವಾಲಯಗಳಿಗೆ ಭೇಟಿ ನೀಡಿದ ಜನರು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

ಜಿಲ್ಲಾಡಳಿತವು ಈ ಬಾರಿ ಸ್ಥಳ ಬದಲಾವಣೆ ಮಾಡಿ ನಗರದ ಮಂಡ್ಯ ವಿವಿ ಆವರಣದಲ್ಲಿ ಪಟಾಕಿ ಅಂಗಡಿಗಳನ್ನು ತರೆಯಲು ಅವಕಾಶ ಮಾಡಿಕೊಡಲಾಗಿತ್ತು. ಪಟಾಕಿಯನ್ನೇ ನಿಷೇಧಿಸುವಂತೆ ಹಲವರು ಸರ್ಕಾರಗಳ ಮೇಲೆ ಒತ್ತಾಯವನ್ನು ತಂದಿದ್ದರು. ಆದರೆ, ಜನರು ಮಾತ್ರ ಪರಿಸರ ಕಾಳಜಿ, ಪಟಾಕಿ ದುಷ್ಪರಿಣಾಮಗಳನ್ನು ಗಣನೆಗೇ ತೆಗೆದುಕೊಳ್ಳದೆ ಬಾಕ್ಸ್ಗಟ್ಟಲೆ ಪಟಾಕಿ ಖರೀದಿಸಿ ತೆರಳಿದರು.

ಈವರೆಗೆ ನಗರದ ಒಳಕ್ರೀಡಾಂಗಣದ ಆವರಣದಲ್ಲಿ ನಡೆಯುತ್ತಿದ್ದ ಪಟಾಕಿ ಮಾರಾಟವು ಕಳೆದ ವರ್ಷ ಜಿ.ಬಿ.ದಾಸೇಗೌಡ ವೃತ್ತದಲ್ಲಿನ ಮೈಶುಗರ್ ಮೈದಾನಕ್ಕೆ ಸ್ಥಳಾಂತರಗೊಂಡಿತ್ತು. ಈ ವರ್ಷ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಪಟಾಕಿ ಮಾರಾಟಕ್ಕೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, 20ಕ್ಕೂ ಹೆಚ್ಚು ಸ್ಟಾಲ್ಗಳನ್ನು ಹಾಕಲಾಗಿತ್ತು.

ಎಲ್ಲ ಮಳಿಗೆಗಳಲ್ಲೂ ಹಸಿರು ಪಟಾಕಿಗಳನ್ನು ಮಾರಾಟಕ್ಕಿಡಲಾಗಿದ್ದು, ಜನರು ‘ಹಸಿರು ಪಟಾಕಿ’ಗಳನ್ನು ಕೊಡಿ ಎಂದು ಕೇಳಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು. ಪಟಾಕಿಗಳ ಖರೀದಿಗಾಗಿ ಅಂಗಡಿಗಳ ಮುಂದೆ ಜನರು ಜಮಾಯಿಸಿದ್ದರು. ಬಹುತೇಕ ಜನರು ಮಕ್ಕಳನ್ನು ಕರೆತಂದು ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಮಣ್ಣಿನ ಹಣತೆಗೆ ಬೇಡಿಕೆ: ಹಬ್ಬದ ಹಿನ್ನೆಲೆಯಲ್ಲಿ ಮಣ್ಣಿನ ಆಕರ್ಷಕ ವಿನ್ಯಾಸಗಳ ದೀಪಗಳು ಮಾರುಕಟ್ಟೆಗೆ ಬಂದಿವೆ. ಮಣ್ಣಿನ ಹಣತೆಗಳನ್ನು ₹5 ರಿಂದ ₹150 ವರೆಗೆ ಮಾರಾಟ ಮಾಡಲಾಗುತ್ತಿತ್ತು. ಜನರು ಸಂಭ್ರಮದಿಂದ ಅವುಗಳ ಖರೀದಿಸುತ್ತಿದ್ದರು.

ಪಟಾಕಿ ಖರೀದಿ ಜೋರು: ಕೋವಿಡ್ನಿಂದ ಕಂಗೆಟ್ಟಿದ್ದ ನಮಗೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡಿದರೆ ಈ ವರ್ಷ ಪಟಾಕಿ ಖರೀದಿ ಜೋರು ನಡೆದಿದೆ. ಜನರು ಹಬ್ಬ ಆಚರಿಸಲು ಮಕ್ಕಳೊಂದಿಗೆ ಬಂದು ಪೋಷಕರು ಪಟಾಕಿ ಬಾಕ್ಸ್ಗಳನ್ನು ಖರೀದಿ ಮಾಡಿದರು. ಬೆಲೆ ಹೆಚ್ಚಳ ಮಾಡದೇ ಗ್ರಾಹಕರ ಹಿತದೃಷ್ಟಿಯಿಂದ ವ್ಯಾಪಾರ ಮಾಡುತ್ತಿದ್ದೇವೆ ಎಂದು ಪಟಾಕಿ ವ್ಯಾಪಾರಿಗಳಾದ ಯೋಗ, ರಾಜೇಶ, ಶೀತಲ್ ಜೈನ್ ಹೇಳುತ್ತಾರೆ.

ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ: ಪಟಾಕಿ ಖರೀದಿಸಿದ ಕೆಲವರು ಜನರು ತಮ್ಮ ಮನೆ ಮಂದಿಯೊಂದಿಗೆ ಪಟಾಕಿಗಳನ್ನು ಹಚ್ಚಿ ದೀಪಾವಳಿ ಹಬ್ಬ ಆಚರಿಸಿದರು. ಮಕ್ಕಳು ಸಹ ಪಟಾಕಿ ಸಿಡಿಸಿ ಸಂತಸಪಟ್ಟರು. ಇನ್ನು ಕೆಲವರು ಶನಿವಾರ ಬಲಿಮಾಡ್ಯಮಿಯಂದು ಪಟಾಕಿ ಸಿಡಿಸಲು ಖರೀದಿಯಲ್ಲಿ ನಿರತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.