ಪಾಂಡವಪುರ: ಗೃಹ ನಿರ್ಮಾಣ ಸಹಕಾರ ಸಂಘದಿಂದ ಸಾಲ ಪಡೆದಿರುವ 45 ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ಚೆಕ್‌ಬೌನ್ಸ್ ಪ್ರಕರಣ ದಾಖಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಇ.ರವಿಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ತಾಲ್ಲೂಕು ಗೃಹ ನಿರ್ಮಾಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರ ಸದಸ್ಯರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

2023–24ನೇ ಸಾಲಿನಲ್ಲಿ ಸಂಘ ₹9.90ಲಕ್ಷ ಸಾಲ ವಸೂಲಿ ಮಾಡಲಾಗಿದ್ದು, ₹3.12ಲಕ್ಷ ಲಾಭದಲ್ಲಿದೆ. ₹ 31.91ಲಕ್ಷ ಸಾಲ ವಸೂಲಿ ಬಾಕಿ ಇದೆ. ಈ ವರ್ಷ ₹5.60 ಸಾಲ ನೀಡಲಾಗಿದೆ. 46 ಷೇರುದಾರರು ಸಾಲ ಮರುಪಾವತಿಸಿದ್ದಾರೆ. 45 ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಪೈಕಿ ಪ್ರಕರಣಗಳಲ್ಲಿ ಸಾಲದ ಮೊತ್ತ ಹಿಂದುರುಗಿಸಿದ್ದಾರೆ. ಈ ವರ್ಷ 25 ಸುಸ್ತಿದಾರರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಜತೆಗೆ ಸಾಲ ವಸೂಲಾತಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದರಿಂದ ಸಾಲ ವಸೂಲಾತಿ ವಿಳಂಬವಾಗಲಿದೆ. ಹಾಗಾಗಿ ರಾಜಿ ಸಂಧಾನದ ಮೂಲಕ ಬಗೆಹರಿಸಲಾಗುತ್ತಿದೆ ಎಂದು ಹೇಳಿದರು.

ಬಡಾವಣೆ ನಿರ್ಮಿಸಲು ಸಂಘದಿಂದ ಚಂದ್ರೆ ಗ್ರಾಮದ ಬಳಿ ಖರೀದಿಸಿರುವ ಜಮೀನಿನ ವಿಚಾರವಾಗಿ ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರುದಾರರು ರಾಜಿ ಸಂದಾನ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಜಮೀನು ಮಾಲೀಕರು ಇ–ಸ್ವತ್ತು ಮಾಡಿಸಿಕೊಟ್ಟರೆ ಭೂಮಿ ನೋಂದಣಿ ಮಾಡಿಕೊಳ್ಳಲಾಗುವುದು. ಸಂಘದಿಂದ ಜಮೀನು ಮಾಲೀಕರಿಗೆ ಈವರೆಗೆ ನೀಡಿರುವ ₹1.30 ಕೋಟಿ ಹಣಕ್ಕೆ ಬ್ಯಾಂಕ್ ನೀಡುವ ಬಡ್ಡಿ ದರದಂತೆ ಭೂ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದರು.

ತಡೆಯಾಜ್ಞೆ ಆರೋಪ: ಸಂಘದ ಮಾಜಿ ಅಧ್ಯಕ್ಷ ಕೆ.ಕುಬೇರ ಮಾತನಾಡಿ, ಸಂಘದಲ್ಲಿ ನಡೆದಿರುವ ಭ್ರಷ್ಟಚಾರದ ಬಗ್ಗೆ ನಿಯಮ 64ರ ಅಡಿಯಲ್ಲಿ ತನಿಖೆಗೆ ಸಹಕಾರ ಇಲಾಖೆ ಆದೇಶಿಸಿದೆ. ಆದರೆ ಆಡಳಿತ ಮಂಡಳಿ ಸದಸ್ಯರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಆರೋಪಿಸಿದರು. ಯಾವ ಉದ್ದೇಶದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಪ್ರಶ್ನಿಸಿದರು.

ಅಧ್ಯಕ್ಷ ರವಿಕುಮಾರ್ ಇದಕ್ಕೆ ಪ್ರತಿಕ್ರಿಯಿಸಿ , ಸಹಕಾರ ಇಲಾಖೆಯ ಅಧಿಕಾರಿಗಳು ಈ ಮೊದಲೇ ತನಿಖೆ ನಡೆಸಿ ಭ್ರಷ್ಟಚಾರ ನಡೆದಿಲ್ಲ ಎಂಬುದಾಗಿ ವರದಿ ನೀಡಿದ್ದಾರೆ. ಪುನರ್ ತನಿಖೆಗೆ ಇಲಾಖೆ ಆದೇಶಿಸಿದ್ದು, ಸಂಘದ ಅಭಿವೃದ್ಧಿಗಾಘಿ ತಡೆಯಾಜ್ಞೆ ತರಲಾಗಿದೆ ಎಂದು ವಿವರಿಸಿದರು.

ಸಂಘದಲ್ಲಿರುವ ಸಹಕಾರ ಶಿಕ್ಷಣ ನಿಧಿ ಹಾಗೂ ಅಮಾನತು ಲೆಕ್ಕದಲ್ಲಿರುವ ಷೇರಿನ ಹಣವನ್ನು ಆಪತ್ತು ನಿಧಿಗೆ ವರ್ಗಾಯಿಸಬೇಕು, ಸಂಘ ಸ್ಥಾಪನೆಯಾಗಿ 75 ವರ್ಷ ಪೂರೈಸಿದ್ದು ಬೆಳ್ಳಿ ಹಬ್ಬ ಆಚರಣೆಗೆ ಕ್ರಮವಹಿಸುವಂತೆ ಸದಸ್ಯರು ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಗಳಿಗೆ ಸಲಹೆ ನೀಡಿದರು.

ಸಂಘದ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಬಿ.ಎಸ್.ಜಯರಾಮ, ಡಿ.ಹುಚ್ಚೇಗೌಡ, ಎಚ್.ಎಲ್.ಮುರುಳಿಧರ್, ಚಿಟ್ಟಿಬಾಬು, ಎನ್.ಭಾಸ್ಕರ್, ಕಣ್ಣ, ಆದರ್ಶ ರಾಮು, ಜ್ಯೋತಿ ವಾಸುದೇವ್ ರೋಜಾ, ಎಸ್.ಬಿ.ಕೃಷ್ಣಯ್ಯ, ಬಿ.ಕೆ.ರೂಪಾವತಿ, ಕಾರ್ಯದರ್ಶಿ ಎಚ್.ಎಸ್.ಪ್ರಕಾಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.