ಮಂಡ್ಯ: ಶಾಸಕ ಸಿ.ಎಸ್.ಪುಟ್ಟರಾಜು ಅವರ ಬೆದರಿಕೆಗೆ ಹೆದರಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 30ಕ್ಕೂ ಹೆಚ್ಚು ಅಕ್ರಮ ಗಣಿ ಲಾರಿಗಳನ್ನು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ ಘಟನೆ ಶುಕ್ರವಾರ ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್ಎಸ್ ಬಳಿಯ ಚೆಕ್ಪೋಸ್ಟ್ ಬಳಿ ನಡೆದಿದೆ.

ಬೇಬಿಬೆಟ್ಟ ಕಾವಲು ಪ್ರದೇಶದಲ್ಲಿ ಗಣಿ ಚಟುವಟಿಕೆ ನಿಷೇಧಿಸಿದ್ದರೂ ಅಕ್ರಮವಾಗಿ ಗಣಿ ಚಟುವಟಿಕೆ ನಡೆಸುತ್ತಿದ್ದು, ನೂರಾರು ಲಾರಿಗಳು ನಿತ್ಯ ಸಂಚರಿಸುತ್ತಿರುವುದರ ಮಾಹಿತಿ ಮೇರೆಗೆ ಅಧಿಕಾರಿಗಳು ಕೆಆರ್ಎಸ್ ಚೆಕ್ಪೋಸ್ಟ್ ಬಳಿ 30ಕ್ಕೂ ಹೆಚ್ಚು ಲಾರಿಗಳನ್ನು ತಡೆದರು. ಬಹುತೇಕ ಲಾರಿಗಳಿಗೆ ಕಲ್ಲು ಸಾಗಿಸಲು ಅನುಮತಿ ಇರಲಿಲ್ಲ.

ಈ ವಿಚಾರ ತಿಳಿದ ಶಾಸಕ ಸಿ.ಎಸ್.ಪುಟ್ಟರಾಜು ಸ್ಥಳಕ್ಕೆ ಬಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ‘ಜಿಲ್ಲಾ ಸಮಿತಿ ತೀರ್ಮಾನದಂತೆ ಗಣಿ ಚಟುವಟಿಕೆಗೆ ಅವಕಾಶವಿದೆ. ರಾಜ್ಯ ಮಟ್ಟದ ಕಮಿಟಿಯಲ್ಲೂ ಸರ್ಕಾರದ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ. ನೀವು ಯಾವುದೋ ಬದನೆಕಾಯಿ ಕ್ರಮ ಕೈಗೊಳ್ಳುತ್ತೀರೋ ಕೈಗೊಳ್ಳಿ, ಗಾಡಿಗಳನ್ನು ಹಿಡಿದರೆ ನಾನು ಸುಮ್ಮನಿರುವುದಿಲ್ಲ’ ಎಂದರು. ನಂತರ ಅಧಿಕಾರಿಗಳು ಲಾರಿಗಳನ್ನು ಜಪ್ತಿ ಮಾಡದೆ, ಪ್ರಕರಣವನ್ನೂ ದಾಖಲಿಸದೆ ಬಿಟ್ಟು ಕಳುಹಿಸಿದರು.

ಅದೇ ಸಂದರ್ಭದಲ್ಲಿ ಶಾಸಕರು, ‘ಕೊಲೆ ಕೇಸ್ನಲ್ಲಿ ಫಿಟ್ ಮಾಡಿಸುವೆ’ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.