ಮಳವಳ್ಳಿ: ಕೇವಲ 1 ರೂಪಾಯಿಗೆ ತಟ್ಟೆ ಇಡ್ಲಿ ಮತ್ತು ದೋಸೆ ನೀಡುತ್ತಿದ್ದ ಗಂಗಾಮತಸ್ಥರ ಬೀದಿ ರಸ್ತೆಯ ಉಂತ್ತೂರಮ್ಮನ ತೋಟದ ನಿವಾಸಿ ಕುಳ್ಳಚನ್ನಯ್ಯ ಅವರ ಪತ್ನಿ, ಹೋಟೆಲ್ ಹೊನ್ನಮ್ಮ (70) ಅನಾರೋಗ್ಯದಿಂದ ಬುಧವಾರ ಸಂಜೆ ನಿಧನರಾದರು.

50 ವರ್ಷಗಳಿಂದ ಒಂದು ಸಣ್ಣ ಶೆಡ್‌ನಲ್ಲಿ ಹೋಟೆಲ್ ನಡೆಸುತ್ತಿದ್ದ ಅವರು ಬಹಳ ಹಿಂದೆ 10 ಪೈಸೆಗೆ ಇಡ್ಲಿ, ದೋಸೆ ನೀಡುತ್ತಿದ್ದರು. ಪೈಸೆ ಚಲಾವಣೆ ಸ್ಥಗಿತಗೊಂಡ ನಂತರವೂ ಒಂದು ರೂಪಾಯಿಗೆ ತಟ್ಟೆಇಡ್ಲಿ, ದೋಸೆ ಯನ್ನು ನೀಡುತ್ತಿದ್ದರು.

ಪುತ್ರ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದರು. ಪುತ್ರಿ ಅವರಿಗೆ ನೆರವಾಗಿದ್ದರು. ಸೊಸೈಟಿಯಲ್ಲಿ ನೀಡುತ್ತಿದ್ದ ಅಕ್ಕಿ ಯಲ್ಲಿ ಇಡ್ಲಿ, ದೋಸೆ ಮಾಡುತ್ತಿದ್ದರು.

ಲಾಕ್‌ಡೌನ್ ಸಂದರ್ಭದಲ್ಲೂ ಹಸಿದು ಬಂದವರಿಗೆ ತಿಂಡಿ ನೀಡಿದ್ದಾರೆ.

ಹೊನ್ನಮ್ಮ ಪಟ್ಟಣದ ಬಡವರ ಹಾಗೂ ಹಸಿದವರಿಗೆ ₹ 1 ರೂಪಾಯಿಗೆ ಇಡ್ಲಿ ಹಾಗೂ ದೋಸೆ ನೀಡುತ್ತಿದ್ದರು. ಇನ್ನು ಮುಂದೆ ಅವರ ಕುಟುಂಬದವರು ಹೋಟೆಲ್ ನಡೆಸಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.