ಮಂಡ್ಯ: ಸೊಸೆ ಕೊಲೆ ಮಾಡಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಮಂಗಳವಾರ ಇಲ್ಲಿಯ ಉಪ ಕಾರಾಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ನಾಗರಾಜ್ (47) ಆತ್ಮಹತ್ಯೆ ಮಾಡಿಕೊಂಡ ಕೈದಿ. ಮಂಗಳವಾರ ಬೆಳಿಗ್ಗೆ ತಾನು ತೊಟ್ಟಿದ್ದ ಪ್ಯಾಂಟ್ ದಾರದ ಸಹಾಯದಿಂದ ಜೈಲು ಕೊಠಡಿಯ ದೊಡ್ಡ ಮೊಳೆಗೆ ನೇಣು ಹಾಕಿಕೊಂಡಿದ್ದಾನೆ. ಉಸಿರುಗಟ್ಟಿ ಒದ್ದಾಡುತ್ತಿದ್ದಾಗ ಇತರ ಕೈದಿಗಳು ಗಮನಿಸಿ ತಕ್ಷಣ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆತನನ್ನು ಕೆಳಗಿಳಿಸಿ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ನಾಗರಾಜ್ ತನ್ನ ಸೊಸೆಯೊಂದಿಗೆ ಅಕ್ರಮ ಸಂಬಂಧ ಬಯಸಿದ್ದ. ಅದಕ್ಕೆ ಸೊಸೆ ಒಪ್ಪದಿದ್ದಾಗ ಆಕೆಯನ್ನು ಇರಿದು ಕೊಲೆ ಮಾಡಿದ್ದ. ಸಂಬಂಧಿಕರ ಮನೆಯಲ್ಲಿ ತಲೆತಪ್ಪಿಸಿಕೊಂಡಿದ್ದ ಆತನನ್ನು ಬಂಧಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.