ಮೈಸೂರು: ‘ಬುಡಕಟ್ಟು ಜನಾಂಗದವರು ಕಾಡಿನಲ್ಲಿರುವ ದೇವರನ್ನು ಪೂಜೆ ಮಾಡುತ್ತಾರೆ. ನಾಗರಿಕ ಸಮಾಜದಿಂದ ದೂರ ಇರುತ್ತಾರೆ. ಅವರಲ್ಲಿ ವಿಶಿಷ್ಟ ಸಂಸ್ಕೃತಿ, ಆಚರಣೆ ಇದೆ. ಅವರಲ್ಲೂ ಏಸು ಸ್ವಾಮಿಯನ್ನು ದೇವರು ಎಂದು ಒಪ್ಪಿಕೊಳ್ಳುವಂಥ ವಿವೇಚನೆ ಬಂದ ಬಳಿಕ ಅವರಿಗೆ ಮೀಸಲಾತಿ ಬೇಕಿಲ್ಲ’ ಎಂದು ಸಂಸದ ಪ್ರತಾಪಸಿಂಹ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ತಡೆಯಬೇಕು, ಅವರ ವಿಶಿಷ್ಟತೆಯನ್ನು ಉಳಿಸಬೇಕು ಎಂಬ ಕಾರಣದಿಂದ ಮತಾಂತರಗೊಂಡವರಿಗೆ ಮೀಸಲಾತಿ ನೀಡಬಾರದು’ ಎಂದು ಹೇಳಿದ್ದೇನೆ ಎಂದರು.

‘ಜಾತಿ ವ್ಯವಸ್ಥೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ಈ ಕಾರಣದಿಂದಲೇ ಪರಿಶಿಷ್ಟರಿಗೆ ಮೀಸಲಾತಿ ನೀಡಲಾಗಿದೆ. ಅವರನ್ನು ಈಗ ದಲಿತ ಕ್ರಿಶ್ಚಿಯನ್ನರು ಎಂದು ಹೇಳಿಕೊಂಡು ಮೀಸಲಾತಿ ಕೊಡಿ ಎಂದು ಬರುತ್ತಾರೆ. ಕ್ರಿಶ್ಚಿಯನ್ ಮತ್ತು ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂದು ಅವರೇ ಹೇಳುತ್ತಾರೆ. ಈ ಮಾತಿಗೆ ವಿವೇಚನೆ ಇದೆಯೇ ಎಂಬುದನ್ನು ಹೇಳಿದ್ದೇನೆ. ಅದನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸುವುದು ಬೇಡ’ ಎಂದರು.

ಆದಿವಾಸಿಗಳಿಗೆ ನೀಡುವ ಸವಲತ್ತುಗಳನ್ನು, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಬುಡಕಟ್ಟು ಜನರಿಗೆ ವಿತರಿಸಬಾರದು ಎಂದು ಸಂಸದ ಪ್ರತಾಪಸಿಂಹ ಅವರು ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.