ಮೈಸೂರು: ‘ಜಿ.ಟಿ. ದೇವೇಗೌಡರ ರಾಜಕೀಯ ಸಾಕು, ಅವರ ಮಗ ಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಕುಟುಂಬ ತೀರ್ಮಾನಿಸಿದಂತಿದೆ. ಕಾಂಗ್ರೆಸ್ನಲ್ಲಿ ಮುಖಂಡರು ಭರ್ತಿಯಾಗಿ ದ್ದಾರೆ. ಬಿಜೆಪಿ–ಜೆಡಿಎಸ್ನಲ್ಲೂ ಜಾಗವಿಲ್ಲ. ಹೀಗಾಗಿ, ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂಬುದು ಅವರ ಆದೇಶ’ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ
ಮಾತನಾಡಿ, ‘ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಂತರದಲ್ಲಿ ಕಾಂಗ್ರೆಸ್ ಸೇರ್ಪಡೆ ಸಂಬಂಧ ಸಿದ್ದರಾಮಯ್ಯ ಸೇರಿದಂತೆ ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಅಲ್ಲಿಂದ ಆಹ್ವಾನ ಬಂದಿಲ್ಲ. ಅಲ್ಲಿಗೆ ಹೋಗುವುದೂ ಇಲ್ಲ’ ಎಂದರು.

‘ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಗೆಲ್ಲಬೇಕಿತ್ತು. ಆದರೆ, ಸೋಲು–ಗೆಲುವು ಸಹಜ. ಮೂರು ಬಾರಿ ಸೋತವರು ಮತ್ತೆ ಗೆದ್ದು ಮಂತ್ರಿಯಾದ ಉದಾಹರಣೆ ಇದೆ. ನಿಖಿಲ್ ಇದನ್ನೇ ಸವಾಲಾಗಿ ಸ್ವೀಕರಿಸಿ ಪಕ್ಷ ಕಟ್ಟಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.